ಹುಡುಗಿ ಮದ್ವೆ ವಯಸ್ಸು ಕನಿಷ್ಠ 21; ಮಸೂದೆ ಪರಿಶೀಲಿಸಬೇಕಾದ 31 ಸದಸ್ಯರ ಸಂಸದೀಯ ಸಮಿತಿಯಲ್ಲಿ ಏಕೈಕ ಸ್ತ್ರೀ!

Parliament 1 2 MAR 20
Published on

ನವದೆಹಲಿ: ಹುಡುಗಿಯ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸುವ ಮಹತ್ವದ ಮಸೂದೆ ಸಂಸತ್ತಿನಲ್ಲಿ ಮಂಡಿಸಲಾಗಿದ್ದೇನೋ ನಿಜ. ಆದರೆ ಮಸೂದೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಲೆಂದು ಮತ್ತೊಂದು ಸಂಸದೀಯ ಸಮಿತಿ ರಚಿಸಿ ಅದಕ್ಕೆ ಜವಾಬ್ದಾರಿ ವಹಿಸಲಾಗಿದೆ. ಆದರೆ 31 ಜನರ ಆ ಸಮಿತಿಯಲ್ಲಿ ಏಕೈಕ ಸ್ತ್ರೀ ಇರುವುದು ಜನರು ಹುಬ್ಬೇರಿಸುವಂತೆ ಮಾಡಿದೆ.

ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ ಇತ್ತೀಚೆಗೆ ಸದನದಲ್ಲಿ ಮಂಡಿಸಿದ ಸರ್ಕಾರ, ಅದರಲ್ಲಿ ಹುಡುಗಿಯ ಮದುವೆಯ ಗರಿಷ್ಠ ವಯಸ್ಸನ್ನು 21 ವರ್ಷಕ್ಕೆ ಏರಿಸುವ ಮಹತ್ವದ ಅಂಶ ಇರುವುದನ್ನು ಪ್ರಸ್ತಾಪಿಸಿತ್ತು. ಬಳಿಕ ಅದೇ ಅಧಿವೇಶನದಲ್ಲಿ ಈ ಮಸೂದೆಯ ಸಾಧಕ-ಬಾಧಕಗಳ ಪರಿಶೀಲಿಸಿ ತಿಳಿಸಲು ಸಂಸದೀಯ ಸಮಿತಿಯನ್ನು ರಚಿಸಲಾಗಿತ್ತು.

ಈ ಸಂಸದೀಯ ಸಮಿತಿಯಲ್ಲಿ 31 ಸಂಸದರಿದ್ದು, ಆ ಪೈಕಿ ಪುರುಷರು 30 ಮಂದಿ ಹಾಗೂ ಮಹಿಳೆ ಮಾತ್ರ ಒಬ್ಬರೇ ಇರುವುದು ಅಚ್ಚರಿ ಮೂಡಿಸಿದೆ. ಹುಡುಗಿಯ ಬದುಕಿನ ಮಹತ್ವದ ಅಂಶವನ್ನು ನಿರ್ಣಯಿಸುವ ಈ ಮಸೂದೆಯ ಪರಿಶೀಲನೆಗೆ ರಚಿಸಿದ ಸಂಸದೀಯ ಸಮಿತಿಯಲ್ಲಿ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಇರಬೇಕಿತ್ತು. ಆದರೆ ಇದರಲ್ಲಿ ತೃಣಮೂಲ ಕಾಂಗ್ರೆಸ್​ನ ಸಂಸದೆ ಸುಶ್ಮಿತಾ ದೇವ್ ಬಿಟ್ಟರೆ ಉಳಿದ 30 ಮಂದಿ ಪುರುಷರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net