

ಹಾವೇರಿ: ನಗರದಲ್ಲಿ ಶ್ರೀ ರಾಮ ಮಂದಿರದಲ್ಲಿ ಸಂಸತ ಭಾರತಿ ಹಾಗೂ ಸ್ವಸ್ತಿ ಶ್ರೀ ಸೇವಾ ಸಂಸ್ಥೆ ವತಿಯಿಂದ ಜ. 22ರಿಂದ 10 ದಿನಗಳ ಕಾಲ ಆಯೋಜಿಸಿದ್ದ ಸಂಸತ ಸಂಭಾಷಣ ಶಿಬಿರ ಸಂಪನ್ನಗೊಂಡಿತು.
40 ಜನ ಶಿಬಿರಾಥಿರ್ಗಳಿಗೆ ಶೃಂಗೇರಿಯ ಶಾರದಾ ಪೀಠದ ವಿದ್ಯಾಥಿರ್ ನವೀನ ಲೇಖ್ವಾರ್ ಸಂಸತ ಸಂಭಾಷಣೆ ಕಲಿಸಿಕೊಟ್ಟರು. ಶಿವರಾತ್ರಿಗೆ ಸಂಸತದಲ್ಲಿ ಸಂವಹಣ ಮಾಡುವ ವಿಧಾನ, ಪ್ರಾರ್ಥನೆ, ಸಂಸತ ಶ್ಲೋಕ ಹಾಗೂ ಸಂಸತ ಸಂಭಾಷಣೆ ಮಾತನಾಡುವ ಕಲೆಯನ್ನು ತಿಳಿಸಿದರು.
ವಿಕಸನಂ ವಿದ್ಯಾ ಪೀಠದ ಸಂಸ್ಥಾಪಕ ಆನಂದತೀರ್ಥ ಜಮಖಂಡಿ ಅಧ್ಯಕ್ಷತೆ ವಹಿಸಿದ್ದರು.
ರತ್ನಾ ಭೈರಣ್ಣನವರ, ದೀಪಾ ಪಾಟೀಲ, ದೀಪಾ ವೆಂಕಟಪುರ, ಶೈಲಾ ಕುಲಕಣಿರ್ ಮತ್ತಿತರರು ಉಪಸ್ಥಿತರಿದ್ದರು.