ಪು.ತಿ.ನ ಉದ್ಯಾನ ಕಳಪೆ ನಿರ್ವಹಣೆ ಬಗ್ಗೆ ಶಾಸಕಿ ಸೌಮ್ಯಾರೆಡ್ಡಿ ಆಕ್ರೋಶ

Sowmya Reddi visit
Published on

ಬೆಂಗಳೂರು : ಜಯನಗರ ವಿಧಾನಸಭಾ ಕ್ಷೇತ್ರದ ಶಾಕಾಂಬರಿನಗರ ವಾರ್ಡ್‌ನ ಪು.ತಿ. ನರಸಿಂಹಾಚಾರ್ ಉದ್ಯಾನದ ಕಳಪೆ ನಿರ್ವಹಣೆ ಕುರಿತು ಶಾಸಕಿ ಸೌಮ್ಯಾರೆಡ್ಡಿ ಪಾಲಿಕೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಕಳೆದ ಶನಿವಾರ ಶಾಕಾಂಬರಿ ನಗರ ವಾರ್ಡ್‌ನಲ್ಲಿ ಕೈಗೊಂಡಿದ್ದ ವಾರ್ಡ್ ಸಮಿತಿ ಸಭೆಯಲ್ಲಿ ಪು.ತಿ.ನ ಉದ್ಯಾನ ನಿರ್ವಹಣೆ ಸರಿಯಾಗಿಲ್ಲ ಎಂದು ಸಾರ್ವಜನಿಕರು ದೂರು ನೀಡಿದ್ದರು. ಕೂಡಲೆ, ಉದ್ಯಾನದಲ್ಲಿ ಬೆಳೆದ ಅನಗತ್ಯ ಗಿಡಗಂಟಿ ಕತ್ತರಿಸಿ, ವಾಯು ವಿಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಹೀಗಾಗಿ, ಬುಧವಾರ ಉದ್ಯಾನಕ್ಕೆ ಭೇಟಿ ನೀಡಿ ತಪಾಸಣೆ ಮಾಡಿದ್ದೇನೆ. ಉದ್ಯಾನದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹಾಕಲಾಗಿದ್ದು, ವಾಯು ವಿಹಾರ ಮತ್ತು ವಿಶ್ರಾಂತಿ ಪಡೆಯುವವರಿಗೆ ತೊಂದರೆ ಆಗುತ್ತಿದೆ. ಕೂಡಲೆ, ಸಮಸ್ಯೆ ಬಗೆಹರಿಸಿ ಸಮರ್ಪಕವಾಗಿ ಉದ್ಯಾನ ನಿರ್ವಹಣೆ ಮಾಡುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net