‌ಪರಿಷತ್ ಚುನಾವಣೆ: ಕಾಂಗ್ರೆಸ್​ನಿಂದ ಹರಿಪ್ರಸಾದ್​, ನಸೀರ್​ ಅಹ್ಮದ್​ ಕಣಕ್ಕೆ

parishthweb
Published on

ಬೆಂಗಳೂರು: ವಿಧಾನ‌ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶಿಫಾರಸು ಮಾಡಿದ್ದ ನಸೀರ್ ಅಹ್ಮದ್ ಮತ್ತು ಹೈ ಕಮಾಂಡ್ ಆಯ್ಕೆಯಾಗಿ ಬಿ.ಕೆ.ಹರಿಪ್ರಸಾದ್ ಹೆಸರನ್ನು ಅಂತಿಮಗೊಳಿಸಲಾಗಿದೆ.

ಮುದ್ದಹನುಮೇಗೌಡ, ಎಂ.ಆರ್. ಸೀತಾರಾಂ, ನಿವೇದಿತ್ ಆಳ್ವ ಸೇರಿ ಮೂವತ್ತು ಪ್ರಬಲ ಆಕಾಂಕ್ಷಿಗಳಿದ್ದರು. ಒಟ್ಟಾರೆ ಇನ್ನೂರು ಮಂದಿ ಅರ್ಜಿ ಸಲ್ಲಿಸಿ, ಅವಕಾಶ ಕೋರಿದ್ದರು.

ಗುರುವಾರ ಬೆಳಗ್ಗೆ ಬಿ.ಕೆ.ಹರಿಪ್ರಸಾದ್ ಹಾಗೂ ನಸೀರ್ ಅಹ್ಮದ್ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net