ಮರಿತಿಬ್ಬೇಗೌಡರನ್ನು ಬೆಂಬಲಿಸಿ

1 antara
Published on

ಅಂತರಸಂತೆ : ಶಾಸಕ ಅನಿಲ್ ಚಿಕ್ಕಮಾದು ಎಚ್.ಡಿ.ಕೋಟೆ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು, ಪಕ್ಷ ಸಂಘಟನೆ ಮತ್ತು ಜನಪರ ಕಾಳಜಿಗಳು ಮರಿತಿಬ್ಬೇಗೌಡರ ಗೆಲುವಿಗೆ ಪೂರಕವಾಗಿವೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಅಶೋಕ್ ಹೇಳಿದರು.ವಿಧಾನ ಪರಿಷತ್ ಚುನಾವಣೆಯ ಹಿನ್ನ್ನೆಲೆಯಲ್ಲಿ ಅಂತರಸಂತೆ, ಮಗ್ಗೆ, ಹೊನ್ನಮ್ಮನಕಟ್ಟೆ ಗ್ರಾಮಗಳ ಪ್ರೌಢಶಾಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡ ಪರ ಅವರು ಶನಿವಾರ ಮತಯಾಚನೆ ನಡೆಸಿದರು. ವಿಧಾನ ಪರಿಷತ್ ಬುದ್ಧಿವಂತರ ಚಾವಡಿ ಎಂದೇ ಖ್ಯಾತವಾಗಿದೆ. ಕಳೆದ 24 ವರ್ಷಗಳಿಂದ 4 ಬಾರಿ ಪರಿಷತ್ ಸದಸ್ಯರಾಗಿ, ಉಪಸಭಾಪತಿಗಳಾಗಿ ಮೌಲ್ಯಯುತ ರಾಜಕಾರಣ ಮಾಡಿದವರು ಮರಿತಿಬ್ಬೇಗೌಡರು. ಶಿಕ್ಷಕರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಅವರು ಮಾಡಿದ್ದಾರೆ. ಮತ್ತೊಮ್ಮೆ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಅವರನ್ನು ವಿಧಾನ ಪರಿಷತ್ತಿಗೆ ಆರಿಸಿ ಕಳಿಸುವಲ್ಲಿ ಶಿಕ್ಷಕರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು. ಪಕ್ಷದ ಸ್ಥಳೀಯ ಮುಖಂಡರು ವಿವಿಧ ಶಾಲೆ, ಕಾಲೇಜುಗಳ ಶಿಕ್ಷಕ, ಶಿಕ್ಷಕಿಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net