ಪರಿಣೀತಿ ಚೋಪ್ರಾ-ರಾಘವ್ ಛಡ್ಡಾ ವಿವಾಹ ಆಮಂತ್ರಣ ಪತ್ರಿಕೆ ಲೀಕ್​!; ಇಲ್ಲಿವೆ ಫೋಟೋಸ್​

Untitled design - 2023-09-13T190120.538
Published on

ನವದೆಹಲಿ: ಕಳೆದ ಹಲವು ದಿನಗಳಿಂದಲೂ ಬಾಲಿವುಡ್​ ನಟಿ ಪರಿಣೀತಿ ಚೋಪ್ರಾ ಮತ್ತು ಆಮ್ ಆದ್ಮಿ ಪಾರ್ಟಿ (AAP) ನಾಯಕ ರಾಘವ್ ಛಡ್ಡಾ ಅವರ ಮದುವೆ ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಈ ವರದಿಗಳ ಬೆನ್ನಲ್ಲೇ ಇದೀಗ ಮದುವೆಯ ಆಮಂತ್ರಣ ಪತ್ರಿಕೆ ಸೋರಿಕೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿವೆ.

ಸೆಪ್ಟೆಂಬರ್ 24, 2023 ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿರುವ ದಂಪತಿಗಳ ಮದುವೆಯ ಆಮಂತ್ರಣದ ಹಲವಾರು ಫೋಟೋಗಳು, ಅಧಿಕೃತ ಪೋಸ್ಟ್​ಗೂ ಮುನ್ನವೇ ಸೋರಿಕೆಯಾಗಿದೆ. ಉದಯ್‌ಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣೀತಿ ಮತ್ತು ರಾಘವ್ ಅವರ ವಿವಾಹ ಪೂರ್ವ ಸಂಭ್ರಮಗಳು ನಡೆಯಲಿವೆ. ಸದ್ಯ ವೈರಲ್ ಆದ ಆಹ್ವಾನದ ಪತ್ರಿಕೆಯಲ್ಲಿನ ಮಾಹಿತಿ ಪ್ರಕಾರ, ಮದುವೆ ಸಮಾರಂಭ ತಾಜ್ ಸರೋವರದಲ್ಲಿ ನಡೆಯಲಿದೆ.

ವರದಿಯ ಪ್ರಕಾರ, ಭಾನುವಾರ (ಸೆಪ್ಟೆಂಬರ್ 24) ನಡೆಯಲಿರುವ ರಾಘವ್​ ಛಡ್ಡಾ ಮತ್ತು ಪರಿಣೀತಿ ಚೋಪ್ರಾ ಮದುವೆಯ ಆರತಕ್ಷತೆ ಸಮಾರಂಭಕ್ಕೆ ಬಾಲಿವುಡ್​ ಚಿತ್ರರಂಗದವರು, ರಾಜಕಾರಣಿಗಳು ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಪಂಜಾಬಿ ಸಂಪ್ರದಾಯದಂತೆ ಮದುವೆ ನಡೆಯಲಿದ್ದು, ಸಮಾರಂಭದಲ್ಲಿ ಸುಮಾರು 200 ಅತಿಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net