ಪರಿಣಿತಿ ಚೋಪ್ರಾ ಗರ್ಭಿಣಿ ವದಂತಿ! ನಟಿಯ ತಂಡ ಬಿಚ್ಚಿಟ್ಟ ಅಸಲಿ ಸಂಗತಿಯಿದು

WhatsApp Image 2024-03-09 at 5.37.40 PM
Published on

ಮುಂಬೈ: ಕಳೆದ ವರ್ಷ ರಾಜಕಾರಣಿ ರಾಘವ್ ಚಡ್ಡಾ ಅವರನ್ನು ವಿವಾಹವಾದ ಬಾಲಿವುಡ್​ನ ಸ್ಟಾರ್​ ನಟಿ ಪರಿಣಿತಿ ಚೋಪ್ರಾ, ಇದೀಗ ಮದುವೆಯಾಗಿ 7 ತಿಂಗಳಾಗಿದೆ. ಇದರ ಬೆನ್ನಲ್ಲೇ ರಾಘವ್-ಪರಿಣಿತಿ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ನಟಿಯ ಇತ್ತೀಚಿಗಿನ ವಿಡಿಯೋ ಕೂಡ ಇದೇ ಅನುಮಾನವನ್ನು ಹುಟ್ಟುಹಾಕಿದ್ದು, ಅಭಿಮಾನಿಗಳು ಇದು ನಿಜವೇ ಇರಬಹುದು ಎಂದು ಅಂದುಕೊಂಡಿದ್ದಾರೆ. ಆದರೆ, ಕೆಲವರು ಈ ಸಂಗತಿ ನಿಜವಲ್ಲ ಎಂದು ಹೇಳಿದ್ದರು. ಆದರೆ ಈ ಕುರಿತು ಇದೀಗ ನಟಿಯ ತಂಡವೇ ಸ್ಪಷ್ಟನೆ ನೀಡಿದೆ.

ಬಾಲಿವುಡ್​ ಸ್ಟಾರ್​ಗಳಾದ ದೀಪಿಕಾ-ರಣ್‌ವೀರ್‌ ದಂಪತಿ ಗುಡ್‌ ನ್ಯೂಸ್‌ ಕೊಟ್ಟ ಬೆನ್ನಲ್ಲೇ ಪರಿಣಿತಿ ಕೂಡ ಸಿಹಿಸುದ್ದಿ ಕೊಡಲು ರೆಡಿಯಾದ್ರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ತೀವ್ರ ಕಾಡುತ್ತಿದೆ. ನಟಿಯ ಬೇಬಿ ಬಂಪ್ ಲುಕ್ ಕೂಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಸ್ಟಾರ್ ಹೀರೋಯಿನ್ ಪರಿಣಿತಿ ಚೋಪ್ರಾ ಕಳೆದ ವರ್ಷ ದೆಹಲಿಯಲ್ಲಿ ನಡೆದ ಅದ್ದೂರಿ ವಿವಾಹದಲ್ಲಿ ರಾಜಕಾರಣಿ ರಾಘವ್ ಚಡ್ಡಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಪರಿಣಿತಿ ತನ್ನ ಚೊಚ್ಚಲ ಮಗುವಿಗೆ ಗರ್ಭಿಣಿಯಾಗಿದ್ದಾಳೆ ಎಂಬುದು ಮುಂಬೈ ಚಿತ್ರ ವಲಯದ ಮಾತು. ಈ ಸುದ್ದಿ ವೈರಲ್ ಆದ ತಕ್ಷಣವೇ, ಪರಿಣಿತಿ ಟೀಮ್​ ನಟಿಯ ಗರ್ಭಿಣಿಯಾಗಿರುವುದು ನಿಜ ಎಂಬ ಸಂಗತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಇವೆಲ್ಲಾ ಸುಳ್ಳು ಸುದ್ದಿ ಎಂದು ವರದಿ ಮಾಡಿದೆ.

ಪರಿಣಿತಿ ಮತ್ತು ರಾಘವ್ ಶೀಘ್ರದಲ್ಲೇ ಪ್ರತಿಷ್ಠಿತ ಕಾರ್ಯಕ್ರಮಕ್ಕಾಗಿ ಲಂಡನ್‌ಗೆ ತೆರಳಲಿದ್ದಾರೆ ಮತ್ತು ಅದಕ್ಕಾಗಿ ತಯಾರಿಯಲ್ಲಿ ನಿರತರಾಗಿದ್ದಾರೆ ಎಂದು ತಂಡ ಮಾಹಿತಿ ಹಂಚಿಕೊಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net