More

    ಬಿಳಿ ಬಣ್ಣದ ಬಟ್ಟೆಯ ಮೇಲಿರುವ ಹಠಮಾರಿ ಕಲೆಗಳನ್ನು ತೆಗೆದುಹಾಕಲು ಇಷ್ಟು ಮಾಡಿ ಸಾಕು…

    ಬೆಂಗಳೂರು: ಬಟ್ಟೆ ತೊಳೆಯಲು ವಾಷಿಂಗ್ ಮಷಿನ್ ಸಹಕಾರಿ. ಅದರ ಸಹಾಯದಿಂದ ರಾಶಿ ರಾಶಿ ಬಟ್ಟೆಗಳನ್ನು ಸುಲಭವಾಗಿ ತೊಳೆಯಬಹುದು. ಆದರೆ ಬಿಳಿ ಬಣ್ಣದ ಬಟ್ಟೆಗಳ ವಿಷಯಕ್ಕೆ ಬಂದರೆ ವಾಷಿಂಗ್ ಮಷಿನ್​​​​​ ಬಿಳಿ ಬಟ್ಟೆ ಸರಿಯಾಗಿ ಒಗೆಯುವುದಿಲ್ಲ ಎಂಬ ಅಭಿಪ್ರಾಯ ಅನೇಕರಿಗಿದೆ. ಆದ್ದರಿಂದ ಬಹುತೇಕರು ವಾಷಿಂಗ್ ಮಷಿನ್​​​ನಲ್ಲಿ ಬಿಳಿ ಬಟ್ಟೆ ಒಗೆಯುವುದನ್ನು ತಪ್ಪಿಸುತ್ತಾರೆ. ನಿಮಗೂ ಹಾಗೆ ಅನಿಸಿದರೆ ಬಿಳಿ ಬಟ್ಟೆ ಒಗೆಯಲು ನಾವು ನಿಮಗೆ ಕೆಲವು ಸುಲಭ ಉಪಾಯಗಳನ್ನು ಹೇಳುತ್ತೇವೆ.

    ಹೌದು, ಈ ಸಲಹೆಗಳನ್ನು ಅನುಸರಿಸಿದರೆ ಬಿಳಿ ಬಟ್ಟೆಗಳನ್ನು ಸುಲಭವಾಗಿ ವಾಷಿಂಗ್​​​​ ಮಷಿನ್​​​​ನಲ್ಲಿ ತೊಳೆಯಬಹುದು. ಅಷ್ಟೇ ಅಲ್ಲ, ಶರ್ಟ್‌, ಅದರ ಕಾಲರ್‌, ಕಫ್‌ಗಳ ಹೊಳಪನ್ನು ಮರಳಿ ತರಬಹುದು.

    ಮೊದಲಿಗೆ ವಾಷಿಂಗ್ ಮಷಿನ್​​​​ನಲ್ಲಿ ಬಿಳಿ ಬಟ್ಟೆಗಳನ್ನು ತೊಳೆಯುವುದು ಹೇಗೆಂದು ನೋಡೋಣ. ನಂತರ ಕೈನಲ್ಲಿ ತೊಳೆಯುವುದು ಹೇಗೆಂದು ತಿಳಿಯೋಣ.

    * ಬಿಳಿ ಬಟ್ಟೆಗಳನ್ನು ತೊಳೆಯುವ ಮೊದಲು ವಾಷಿಂಗ್ ಮಷಿನ್​​​ ಅನ್ನು ಯಾವಾಗಲೂ ಸ್ವಚ್ಛಗೊಳಿಸಬೇಕು.
    * ನೀವು ಬಿಳಿ ಬಟ್ಟೆಗಳನ್ನು ಒಗೆಯುವಾಗ, ಹೊಸ ನೀರನ್ನು ಬಳಸಿ ಮತ್ತು ಅದರಲ್ಲಿ ಇತರ ಬಣ್ಣಗಳ ಬಟ್ಟೆಗಳನ್ನು ಬೆರೆಸಬೇಡಿ.
    * ಬಿಳಿ ಬಟ್ಟೆಯ ಮೇಲೆ ದೊಡ್ಡ ಕಲೆಯಿದ್ದರೆ, ಅದನ್ನು ಕೈಗಳಿಂದ ಮಾತ್ರ ಉಜ್ಜಿ ಸ್ವಚ್ಛಗೊಳಿಸಿ.
    * ವಾಷಿಂಗ್ ಮಷಿನ್​​​​ನಲ್ಲಿ ಬಿಳಿ ಬಟ್ಟೆಗಳನ್ನು ಹಾಕುವ ಮೊದಲು ಅವುಗಳನ್ನು ಡಿಟರ್ಜೆಂಟ್ ನೀರಿನಲ್ಲಿ ಅರ್ಧ ಗಂಟೆಯವರೆಗೆ ನೆನೆಸಿಡಿ.
    * ನೀವು ಬಿಳಿ ಬಟ್ಟೆಗಳನ್ನು ಒಗೆಯುವಾಗ, ಕಲರ್​​​​ ಡಿಟರ್ಜೆಂಟ್ ಬಳಸದಂತೆ ನೋಡಿಕೊಳ್ಳಿ.

    ಹೀಗೂ ಮಾಡಬಹುದು..
    ಬಿಳಿ ಬಟ್ಟೆಯ ಮೇಲೆ ಮೊಂಡುತನದ ಕಲೆ ಇದ್ದರೆ, ವಾಷಿಂಗ್​​​ ಮಷಿನ್​​​​​ನಲ್ಲಿ ತೊಳೆಯುವುದರಿಂದ ಅದು ಅಷ್ಟು ಸುಲಭಕ್ಕೆ ಹೋಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಒಂದು ಬಕೆಟ್ ನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಅಡುಗೆ ಸೋಡಾ ಮತ್ತು 2 ಚಮಚ ವಿನೆಗರ್ ಸೇರಿಸಿ ಮಿಶ್ರಣ ಮಾಡಿ. ಬಿಳಿ ಬಣ್ಣದ ಬಟ್ಟೆಗಳನ್ನು ಅದರಲ್ಲಿ ಅದ್ದಿ ಮತ್ತು ಸ್ವಲ್ಪ ಸಮಯದವರೆಗೆ ಬಿಡಿ, ಇದರಿಂದ ಕಲೆಗಳನ್ನು ತೆಗೆದುಹಾಕಲು ಸುಲಭವಾಗುತ್ತದೆ. ಇದರ ನಂತರ, ಬ್ರಷ್ ಅಥವಾ ಕೈಗಳಿಂದ ಉಜ್ಜುವ ಮೂಲಕ ಕಲೆ (ಸ್ಟೇನ್) ತೆಗೆದುಹಾಕಿ. ಸ್ವಲ್ಪ ಸಮಯದೊಳಗೆ ಸ್ಟೇನ್ ಸ್ವಚ್ಛಗೊಳ್ಳುತ್ತದೆ.

    ನೀರಿನಲ್ಲಿ ಅದ್ದಿ ಬ್ರಷ್ ನಿಂದ ಉಜ್ಜಿ ಸ್ವಚ್ಛಗೊಳಿಸಿದ ನಂತರ, ಶರ್ಟ್ ಅನ್ನು ವಾಷಿಂಗ್​​​​ ಮಷಿನ್​​​​​ನಲ್ಲಿ ಹಾಕಿ. ಶರ್ಟ್ ಮೊದಲಿನಂತೆ ಹೊಳೆಯಲು ಪ್ರಾರಂಭಿಸುತ್ತದೆ. 

    ದುಬಾರಿ ಬಟ್ಟೆ, ಸ್ಟೈಲಿಶ್ ಲುಕ್​​​​​​ನಿಂದಾಗಿಯೇ ಜನಪ್ರಿಯತೆ ಗಳಿಸಿದ್ದಾರೆ ಈ ಸೋಶಿಯಲ್ ಮೀಡಿಯಾ ಸ್ಟಾರ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts