ಚಿಕ್ಕ ಮಗುವಿನಂತೆ ಕಾಣಲು ಪಾಲಕರಿಂದ ಮಗಳಿಗೆ ಕಠಿಣ ಡಯಟ್​; ಇದೀಗ ಯುವತಿ ಪರಿಸ್ಥಿತಿ ನೋಡಿದರೆ ಎಂತಹ ಘೋರ! Strict diet

dk (57) (1)
Published on

Strict diet: ತಮ್ಮ ಮಗಳು ಚಿಕ್ಕ ವಯಸ್ಸಿನಂತೆ ಕಾಣಲು ಕಠಿಣ ದೈಹಿಕ ವ್ಯಾಯಮದ (ಡಯಟ್​) ಕಾರಣದಿಂದ ಇದೀಗ ಆಕೆಯೂ ಘೋರ ಪರಿಸ್ಥಿತಿಯಿಂದ ಕೂಡಿದ್ದು, 20ರ ಯುವತಿ ಕೇವಲ 27 ಕೆ.ಜಿ ತೂಕ ಹೊಂದಿದ್ದಾಳೆ. ಇದರಿಂದ ಪಾಲಕರ ವಿರುದ್ಧ ಕೇಸ್​ ದಾಖಲಾಗಿ, ಶಿಕ್ಷೆಗೆ ಒಳಪಟ್ಟಿದ್ದಾರೆ.

ಹೌದು, ಆಸ್ಟೇಲಿಯಾದಲ್ಲಿ ಘಟನೆ ನಡೆದಿದೆ. ಅಲ್ಲಿನ ಪರ್ತ್​ನಲ್ಲಿ ವಾಸಿಸುತ್ತಿರುವ ದಂಪತಿಗಳು ಮಗುವಿನ ಸಾಕಷ್ಟು ಬೆಳವಣಿಗೆ ಅಡ್ಡಿಯಾಗಿದ್ದಾರೆ. ಕಾರಣ, ಅವಳನ್ನು ಚಿಕ್ಕ ವಯಸ್ಸಿನಂತೆ ಕಾಣುವ ಹಾಗೇ ಮಾಡುವ ಉದ್ದೇಶದಿಂದ ಯುವತಿಗೆ ಮನೆಯಲ್ಲಿ ಶಿಕ್ಷಣ ನೀಡಿದ್ದಾರೆ. ಅಲ್ಲದೆ, ಆಕೆಗೆ 20 ವರ್ಷವಾದರೂ ಚಿಕ್ಕಮಕ್ಕಳಂತೆ ಆಟಿಕೆ ಸಾಮಾನುಗಳು ಕೊಡಿಸುತ್ತದ್ದಾರೆ. ಚಿಕ್ಕಮಗುವಿನಂತೆ ಮಗಳಿಗೆ ಬ್ರೆಷ್​ ಮತ್ತು ಸ್ನಾನ ಮಾಡಿಸುವ ಈ ಪರಿಸ್ಥಿತಿ ಬಂದಿದೆ ಎಂದು ಇವರ ವಿರುದ್ಧ ದಾಖಲಾದ ಪ್ರಕರಣದ ದೂರಿನಲ್ಲಿ ಉಲ್ಲೇಖವಾಗಿದೆ.

ಯುವತಿಯ ಪರಿಸ್ಥಿತಿ ಹೇಗಿದೆ..

ಕಳೆದ 17 ವರ್ಷಗಳಿಂದ ಮಗುವನ್ನು ಬೆಳಸಿದ ಪರಿ ಸರಿಯಿಲ್ಲ. ಮಗಳನ್ನು ಚಿಕ್ಕ ವಯಸ್ಸಿನಂತೆ ಕಾಣುವ ಸಲುವಾಗಿ ಕಠಿಣ ಡಯಟ್​ಗಳನ್ನು ಮಾಡಿಸಲಾಗಿದೆ. ಇದರಿಂದ ತುಂಬಾ ತೆಳ್ಳಗೆ ಆಗಿದ್ದಾಳೆ. ನಡೆದಾಡಲು ಕೂಡ ಆಗದೇ ಇದ್ದ ಪರಿಸ್ಥಿಯಲ್ಲಿ ಆಕೆ ಏಕಾಏಕಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಅಲ್ಲಿನ ವೈದ್ಯರು ಯುವತಿಯ ಪರಿಸ್ಥಿತಿ ಗಮನಿಸಿ ಪಾಲಕರ ಅಭಿಪ್ರಾಯ ಕೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ದೂರು ದಾಖಲಾಗಿದೆ. ಯುವತಿಯ ಆರೋಗ್ಯ ಚೇತರಿಕೆಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪಾಲಕರಿಗೆ ಶಿಕ್ಷೆ ಕೊಟ್ಟ ಕೋರ್ಟ್​

ನಿಮ್ಮ ಮಗಳಿಗೆ ಯಾವುದು ಉತ್ತಮ ಎನ್ನುವುದಕ್ಕಿಂತ ನಿಮ್ಮ ಸ್ವಂತ ಅಭಿಪ್ರಾಯಗಳನ್ನು ನೀವು ಮುಂದಿಟ್ಟಿದ್ದೀರಿ. 20 ವರ್ಷಕ್ಕಿಂತ ಹೆಚ್ಚು ವಯಸ್ಸಿನಲ್ಲಿ ಸ್ವತಂತ್ರ ವಯಸ್ಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಮಗುವನ್ನು ನೀವು ರಚಿಸಿದ್ದೀರಿ. ಆಕೆಯನ್ನು ಎಂದಿಗೂ ಬೆಳೆಯಲು ಅನುಮತಿಸಲಾಗಿಲ್ಲ ಎಂದು ಉಲ್ಲೇಖಿಸಿ ಪಾಲಕರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net