ಪರಮೇಶ ಕೆ.ಉತ್ತನಹಳ್ಳಿ ಅವರಿಗೆ ‘ಅಭಿರುಚಿ ಶಿಕ್ಷಣ ರತ್ನ’ ಪ್ರಶಸ್ತಿ

13
Published on

ಮೈಸೂರು: ಅಭಿರುಚಿ ಬಳಗ, ಅನುಭವಗಳ ಹಂಚಿಕೆ ವೇದಿಕೆಯು ಮೈಸೂರಿನ ಏಳಿಗೆಹುಂಡಿ(ಉತ್ತನಹಳ್ಳಿ)ಯ ಯುವ ಸಾಹಿತಿ, ಸಹಾಯಕ ಪ್ರಾಧ್ಯಾಪಕ ಪರಮೇಶ ಕೆ.ಉತ್ತನಹಳ್ಳಿ ಅವರಿಗೆ 2024ನೇ ಸಾಲಿನ ‘ಅಭಿರುಚಿ ಶಿಕ್ಷಣ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು.
ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಭಿರುಚಿ ಬಳಗದ ಅಧ್ಯಕ್ಷ ರಮೇಶ್, ಉಪಾಧ್ಯಕ್ಷೆ ಉಮಾ ರಮೇಶ್, ಸಂಸ್ಕೃತಿ ಚಿಂತಕ ರಘುರಾಂ ವಾಜಪೇಯಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಮ.ನ.ಲತಾ ಮೋಹನ್ ಇದ್ದರು.
ರೈತಾಪಿ ಕುಟುಂಬದ ಕುಳ್ಳಯ್ಯ ಹಾಗೂ ಸಾಕಮ್ಮ ಪುತ್ರರಾದ ಪರಮೇಶ್ ಬಹುಮುಖ ಪ್ರತಿಭೆಯಾಗಿದ್ದಾರೆ. ನಿರೂಪಣೆ, ಗಾಯನ ಅಲ್ಲದೆ ಕವಿತೆಗಳು, ಕತೆಗಳು, ಲಲಿತಾ ಪ್ರಬಂಧ, ಬಿಡಿ ಬರಹಗಳು ಹೀಗೆ ತಮ್ಮ ಬರಹದ ರೂಪದಲ್ಲಿ ಸಾಹಿತ್ಯವನ್ನು ರಚಿಸುತ್ತಿದ್ದಾರೆ. ನಗರದ ಹಿಂದೂಸ್ಥಾನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net