ದುನಿಯಾ ವಿಜಯ್​ ಕೊಟ್ಟ ಕಂಪ್ಲೇಂಟ್​ ಬಗ್ಗೆ ಪಾನಿಪುರಿ ಕಿಟ್ಟಿ ರಿಯಾಕ್ಷನ್​ ಹೀಗಿದೆ…

panipuri kittty
Published on

ಬೆಂಗಳೂರು: ನಟ ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಪ್ರಕರಣಕ್ಕೆ ಇಗ ಮತ್ತೊಮ್ಮೆ ಜೀವ ಬಂದಿದೆ. ಇದೀಗ ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಮೇಲೆ FIR ದಾಖಲು ಮಾಡಲಾಗಿದೆ. ಈ ಬಗ್ಗೆ ಪಾನಿಪುರಿ ಕಿಟ್ಟಿಯೂ ಪ್ರತಿಕ್ರಿಯೆ ನೀಡಿದ್ದಾರೆ.

2018 ರ ಪ್ರಕರಣ ಮತ್ತೆ ರೀ ಓಪನ್ ಆಗಿದ್ದು ನಟ ದುನಿಯಾ ವಿಜಯರಿಂದ ದೂರು ದಾಖಲಾಗಿದೆ. ಈ ಹಿಂದೆ ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ಕಡತದಲ್ಲೇ ಉಳಿದಿತ್ತು. ಇದೀಗ ಹೈಕೋರ್ಟ್ ಸೂಚನೆ ಮೇರೆಗೆ ದುನಿಯಾ ವಿಜಯ್​ ಇದೀಗ FIR ದಾಖಲಿಸಿದ್ದಾರೆ.

23/09/2018 ರಲ್ಲಿ ದುನಿಯಾ ವಿಜಯ್​ ಮತ್ತು ಪಾನಿಪುರಿ ಕಿಟ್ಟಿ ನಡುವೆ ಗಲಾಟೆ ನಡೆದಿತ್ತು. ಅಂದು ವಸಂತ ನಗರ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ದೇಹದಾರ್ಡ್ಯ ಸ್ಪರ್ಧೆ ನಡೀತಾ ಇತ್ತು. ಅಲ್ಲಿ ಪಾನಿಪುರಿ ಕಿಟ್ಟಿ ಹಾಗೂ ದುನಿಯಾ ವಿಜಯ್​ಗೂ ಗಲಾಟೆ ನಡೆದಿದೆ. ಅಂದು ಪಾನಿಪುರಿ ಕಿಟ್ಟಿ ಸಹೋದರ ಮಾರುತಿ‌ ಗೌಡ ಕೂಡ ಸ್ಪರ್ಧೆ ಮಾಡಿದ್ದ. ಅಂದು ಎರಡೂ ತಂಡಗಳ ನಡುವೆ ಗಲಾಟೆ ನಡೆದಿತ್ತು. ಗಲಾಟೆ ನಂತರ ದುನಿಯಾ ವಿಜಯ್, ಮಾರುತಿಗೌಡನನ್ನು ಕಾರಲ್ಲಿ ಕರೆದೊಯ್ದಿದು ಗಂಭಿರವಾಗಿ ಗಾಯವಾಗುವಂತೆ ಥಳಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾನಿಪುರಿ ಕಿಟ್ಟಿ 'ಮತ್ತೆ ಕೇಸ್ ಓಪನ್ ಆಗಿದೆ. ಹಿಂದೆ ಎರಡು‌ ಬಾರಿ ಸ್ಕ್ವಾಷ್ ಆಗಿತ್ತು. ಅವರೇ ಹೊಡೆದಿದ್ದು ಅನ್ನೋದು ಎಲ್ಲಾರಿಗು ಗೊತ್ತು. ಆದ್ರೆ ಈಗ ಸುಮ್ನೆ ದೂರು ಕೊಡಬೇಕಲ್ಲಾ ಅಂತ ಕಂಪ್ಲೆಂಟ್ ಕೊಟ್ಟಿದ್ದಾರೆ. ನಮ್ಮದು ಏನು ತಪ್ಪಿಲ್ಲ. ಅವರು ದೊಡ್ಡವರು, ಸೆಲೆಬ್ರಿಟಿಗಳು. ಇವತ್ತು ಸಹ ವಿಚಾರಣೆ ಎದುರಿಸಿದ್ದೀನಿ. ಮತ್ತೆ‌ ವಿಚಾರಣೆಗೆ ಕರೆದ್ರೆ ನಾನು ಬಂದು ವಿಚಾರಣೆಗೆ ಹಾಜರಾಗ್ತೀನಿ' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net