ಪಾಣಿಪತ್ ತ್ರಿಬ್ಬಲ್ ಮರ್ಡರ್ ಕೇಸ್ ಇತ್ಯರ್ಥ- ಕೊಲೆಗಾರ ನೂರ್​ಹಸನ್ ಬಹಿರಂಗ ಪಡಿಸಿದ್ದ ಶಾಕಿಂಗ್ ವಿಚಾರ!

murder
Published on

ಚಂಡೀಗಢ: ಹರಿಯಾಣದ ಪಾಣಿಪತ್ ಜಿಲ್ಲೆಯ ಸಮಾಲ್ಕಾ ಪಟ್ಟಣದಲ್ಲಿ ಸೆಪ್ಟೆಂಬರ್ 5ರಂದು ತ್ರಿವಳಿ ಮರ್ಡರ್ ನಡೆದಿತ್ತು. ಇದು ಪೊಲೀಸರಿಗೆ ಭಾರಿ ತಲೆನೋವಾಗಿ ಪರಿಣಮಿಸಿದ್ದ ಪಾಣಿಪತ್ ತ್ರಿವಳಿ ಕೊಲೆಪ್ರಕರಣ ಗುರುವಾರ ಇತ್ಯರ್ಥವಾಗಿದೆ. ಬಂಧಿತ ಆರೋಪಿ ಕೊಲೆಗಾರ ನೂರ್​ಹಸ್ಸನ್ ಹೇಳಿಕೆ ಕೇಳಿ ಪೊಲೀಸರಿಗೆ ಶಾಕ್​ !

ತ್ರಿವಳಿ ಕೊಲೆ ಪ್ರಕರಣದ ಆರೋಪಿ ನೂರ್​ಹಸ್ಸನ್ (27). ಆತ ತನ್ನ ಪತ್ನಿ, ನಾದಿನಿ ಮತ್ತು ಅತ್ತೆಯನ್ನು ಭೀಕರವಾಗಿ ಕೊಲೆಗೈದಿದ್ದ. ನಂತರ ಶವಸಂಭೋಗ ನಡೆಸಿ ಅಲ್ಲಿಂದ ಪರಾರಿಯಾಗಿದ್ದ. ನೂರ್​ಹಸನ್​ ಸೋನೆಪತ್ ಜಿಲ್ಲೆಯ ಪಟ್ಟಿ ಕಲಿಯಾನ ಗ್ರಾಮದ ನಿವಾಸಿ. ಮೃತ ಶವ ಸೆಪ್ಟೆಂಬರ್ 6,7 ಮತ್ತು 8 ರಂದು ಬೇರೆ ಬೇರೆ ಪ್ರದೇಶಗಳಲ್ಲಿ ಪತ್ತೆಯಾಗಿದ್ದವು.

ಆರಂಭಿಕ ತನಿಖೆಯ ಮಾಹಿತಿ ಪ್ರಕಾರ, ಪತ್ನಿಗೆ ಅನೈತಿಕ ಸಂಬಂಧ ಇರುವ ಬಗ್ಗೆ ಆರೋಪಿಗೆ ಸಂದೇಹವಿತ್ತು. ಆಕೆಯ ತಾಯಿ ಮತ್ತು ತಂಗಿ ಆಕೆಯ ಬೆಂಬಲಕ್ಕೆ ನಿಂತ ಕಾರಣ ಆರೋಪಿ ಕೋಪಗೊಂಡಿದ್ದ. ಕೊಲೆ ಮಾಡುವುದಕ್ಕೂ ಮೊದಲು ಅವರೆಲ್ಲರಿಗೂ ಡ್ರಗ್ಸ್ ನೀಡಿದ್ದ. ಹೆಚ್ಚಿನ ತನಿಖೆ, ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net