ಭಾರತ್ ಬಂದ್|ಇಂದು ಎಲ್ಲೆಲ್ಲಿ ಏನೇನು?

punjab agitation
Published on

ನವದೆಹಲಿ: ಸಂಸತ್​ ಅಂಗೀಕರಿಸಿದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಆಗ್ರಹಿಸಿ ಕೆಲವು ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಶುಕ್ರವಾರ ಬೆಳಗ್ಗೆ ಆರಂಭವಾಗಿದೆ. ಉತ್ತರ ಭಾರತದಲ್ಲಿ ಬಂದ್​ನ ತೀವ್ರತೆ ಹೆಚ್ಚಿದ್ದು, ದಕ್ಷಿಣ ಭಾರತದಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ವ್ಯಕ್ತವಾಗಿದೆ.

ಆಲ್​ ಇಂಡಿಯಾ ಫಾರ್ಮರ್ಸ್ ಯೂನಿಯನ್​ (ಎಐಎಫ್​ಯು), ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು), ಆಲ್ ಇಂಡಿಯಾ ಕಿಸಾನ್ ಮಹಾಸಂಘ್ (ಎಐಕೆಎಂ), ಆಲ್ ಇಂಡಿಯಾ ಕಿಸಾನ್ ಸಂಘರ್ಷ ಕೋ ಆರ್ಡಿನೇಶನ್ ಕಮಿಟಿ (ಎಐಕೆಎಸ್​ಸಿಸಿ) ಮತ್ತು ಇತರೆ ರಾಜಕೀಯ ಪಕ್ಷ ಬೆಂಬಲಿತ ಸಂಘಟನೆಗಳು ಪ್ರತಿಭಟನಾ ರಾಲಿ, ಜಾಥಾಗಳನ್ನು ಹಮ್ಮಿಕೊಳ್ಳಲು ಕರೆ ನೀಡಿವೆ.

ಪಂಜಾಬ್​ನಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿ ಅಮೃತಸರದಲ್ಲಿ ರೈಲ್ ರೋಕೊ ಪ್ರತಿಭಟನೆ ನಡೆಸಿದೆ.

ಪಟನಾದಲ್ಲಿ ಆರ್​​ಜೆಡಿ ನಾಯಕ ತೇಜಸ್ವಿ ಯಾದವ್ ಟ್ರ್ಯಾಕ್ಟರ್ ಚಲಾಯಿಸುತ್ತ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ತಮಿಳುನಾಡಿನಲ್ಲಿ ರೈತರ ಪ್ರತಿಭಟನೆ ಹೀಗಿತ್ತು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net