More

    ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧ

    ಗಜೇಂದ್ರಗಡ: ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಗಜೇಂದ್ರಗಡ ಜೈ ಹನುಮಾನ ಹಮಾಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

    ಸಂಘದ ಅಧ್ಯಕ್ಷ ಪರಸಪ್ಪ ಕಲಾಲ ಮಾತನಾಡಿ, ‘ರಾಜ್ಯದ ಹಲವಾರು ಎಪಿಎಂಸಿಗಳಲ್ಲಿ ಮತ್ತು ನಗರ, ಗ್ರಾಮೀಣ ಪ್ರದೇಶದಲ್ಲಿ ನನೆಗುದಿಗೆ ಬಿದ್ದಿರುವ ವಸತಿ ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಕೋವಿಡ್-19 ಲಾಕ್​ಡೌನ್​ನಿಂದಾಗಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾದ ಎಲ್ಲ ಹಮಾಲಿ ಕಾರ್ವಿುಕರಿಗೆ ಆರು ತಿಂಗಳ ಕಾಲ ಪ್ರತಿ ತಿಂಗಳಿಗೆ 7500 ರೂ. ಗಳಂತೆ ಆರ್ಥಿಕ ನೆರವು ನೀಡಬೇಕು’ ಎಂದು ಒತ್ತಾಯಿಸಿದರು.

    ವಸಂತ ಪವಾರ, ಬಸವರಾಜ ಸುರಕೋಡ, ಕುಬೇರಪ್ಪ ಹೊಸಮನಿ, ಸುರೇಶ ಕಾರಬಾರಿ, ಸಿದ್ದಪ್ಪ ಚಲವಾದಿ, ಪರಪ್ಪ ಬಂಡಿ, ರೈಮಾನಸಾಬ್ ಹುನಗುಂದ ಯಮನೂರಪ್ಪ ಪೂಜಾರ, ಮರಿಯಪ್ಪ ಅರಳಿಗಿಡದ, ರಾಮಣ್ಣ ಕದಡಿ, ಯಲ್ಲಪ್ಪ ಸವಡಿ, ಶರಣಪ್ಪ ಕುಂಬಾರ, ರಾಜೇಸಾಬ್ ಭಾಗವಾನ, ಶೇಖಪ್ಪ ಕಲಾಲ, ಮರ್ದಾನಸಾಬ್ ಸೌದಾಗಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts