

ಘಾಜಿಯಾಬಾದ್: ರಸ್ತೆ ಬದಿಯಲ್ಲಿ ಒಂದು ಮೃತದೇಹ ಇದೆ...ತುಂಬ ಹೊತ್ತಿನಿಂದ ಅಲ್ಲಿಯೇ ಇದೆ ಎಂಬ ಕರೆ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬೇಸ್ತು ಬಿದ್ದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ.
ಜನನಿಬಿಡ ರಸ್ತೆಯ ಪಕ್ಕ ಬಿಳಿ ಬಟ್ಟೆಯನ್ನು ಪೂರ್ತಿಯಾಗಿ ಸುತ್ತಿಕೊಂಡ ಸ್ಥಿತಿಯಲ್ಲಿ ದೇಹವೊಂದು ಇತ್ತು. ಅದನ್ನು ನೋಡಿದ ಸ್ಥಳೀಯರು ಮೃತದೇಹವೆಂದೇ ಭಾವಿಸಿದ್ದರು. ಕೊವಿಡ್-19 ಇರುವುದರಿಂದ ಅದನ್ನು ಮುಟ್ಟಲು ಭಯಪಟ್ಟು ಪೊಲೀಸರಿಗೆ ಕರೆ ಮಾಡಿದ್ದರು. ಆದರೆ ನಂತರ ಗೊತ್ತಾಯಿತು...ಅದು ಮೃತದೇಹವಲ್ಲ. ವ್ಯಕ್ತಿಯೋರ್ವ ಮೈತುಂಬ ಬಿಳಿ ಬಟ್ಟೆ ಹೊದ್ದು ಮಲಗಿದ್ದ ಎಂದು. ಇದನ್ನೂ ಓದಿ: PHOTOS|ಫ್ರೆಂಚ್ ನಿರ್ಮಿತ ರಫೇಲ್ ಸೇನೆ ಸೇರಿದ ಕ್ಷಣ : ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ
ಅದು ಮೃತದೇಹವೆಂದು ಭಾವಿಸಿದ ಜನರು, ರಸ್ತೆಯಲ್ಲಿ ನಿಂತು ನೋಡಿ ಮುಂದೆ ಹೋಗುತ್ತಿದ್ದರು. ಹತ್ತಿರ ಸುಳಿಯುತ್ತಿರಲಿಲ್ಲ. ಆದರೆ ಪೊಲೀಸರು ಹತ್ತಿರ ಹೋಗಿ ನೋಡುವಷ್ಟರಲ್ಲಿ ಆ ವ್ಯಕ್ತಿ ಎದ್ದುಕುಳಿತಿದ್ದ. ಅವನು ಹೊದ್ದಿದ್ದು ಬಟ್ಟೆಯಾಗಿರಲಿಲ್ಲ. ಬದಲಿಗೆ ಒಂದು ಬಿಳಿ ಪ್ಲಾಸ್ಟಿಕ್ ಚೀಲವಾಗಿತ್ತು.
ಇದು 29 ಸೆಕೆಂಡ್ಗಳ ವಿಡಿಯೋ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ನೆಟ್ಟಿಗರೂ ಸಹ ವಿಚಿತ್ರ ಕಾಮೆಂಟ್ಗಳನ್ನು ಬರೆದಿದ್ದಾರೆ. (ಏಜೆನ್ಸೀಸ್)