VIDEO: ಪಾಕಿಸ್ತಾನ ನ್ಯೂಸ್​ ಚಾನಲ್ ಸ್ಟುಡಿಯೋದಲ್ಲಿ ಎಡವಟ್ಟು...ಅಯ್ಯೋ, ಮಾತನಾಡುತ್ತಿದ್ದಂತೆ ಬಿದ್ದೇ ಹೋದ್ರು ಪ್ಯಾನಲ್​ ಗೆಸ್ಟು...!

Pakistan 3 March 20
Published on

ಕರಾಚಿ: ಕೆಲವು ವಿಚಿತ್ರಗಳ ಮೂಲಕ ಪಾಕಿಸ್ತಾನಿ ನ್ಯೂಸ್​ ಮೀಡಿಯಾಗಳು ಹಲವು ಬಾರಿ ಸುದ್ದಿಯಾಗುತ್ತಿರುತ್ತವೆ.

ಹಾಗೇ ಈ ಬಾರಿ ಕೂಡ ಪಾಕ್​ ನ್ಯೂಸ್​ ಚಾನಲ್​ವೊಂದರ ಪ್ಯಾನಲ್​ ಚರ್ಚೆ ವೇಳೆ ನಡೆದ ಸಣ್ಣ ಎಡವಟ್ಟಿನ ವಿಡಿಯೋ ವಿಪರೀತ ವೈರಲ್ ಆಗಿದೆ. ಆ ವಿಡಿಯೋಕ್ಕೆ ನೆಟ್ಟಿಗರು ಸಿಕ್ಕಾಪಟೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ದುನ್ಯಾ ನ್ಯೂಸ್​ ಎಂಬ ಸುದ್ದಿ ವಾಹಿನಿಯಲ್ಲಿ ಪ್ಯಾನಲ್​ ಡಿಸ್ಕಶನ್​ ನಡೆಯುತ್ತಿತ್ತು. ಈ ಲೈವ್​ ಶೋದಲ್ಲಿ ಸ್ಯೇದಾ ಆಯೇಷಾ ನಾಜ್​ ಎಂಬುವರು ಕಾರ್ಯಕ್ರಮದ ನಿರೂಪಕಿಯಾಗಿದ್ದರು. ಹಾಗೇ ನಾಲ್ವರು ಅತಿಥಿಗಳು ಚರ್ಚೆಗೆ ಕುಳಿತಿದ್ದರು.

ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕ್​ ಸರ್ಕಾರದ ಬಗ್ಗೆ ಜನರು ಅತೃಪ್ತರಾಗಿದ್ದಾರೆ ಎಂಬ ವಿಷಯದ ಕುರಿತು ಇವರೆಲ್ಲ ಚರ್ಚೆ ನಡೆಸುತ್ತಿದ್ದರು.

ನಾಲ್ವರಲ್ಲಿ ಓರ್ವ ಅತಿಥಿ ಇದೇ ವಿಚಾರವಾಗಿ ಮಾತನಾಡುತ್ತಿದ್ದರು. ಆದರೆ ಹಾಗೆ ಮಾತನಾಡುತ್ತ ಇದ್ದಂತೆ ಕುಳಿತಿದ್ದ ಕುರ್ಚಿ ಮುರಿದು ಹೋಗಿ ಅವರು ಕೆಳಗೆ ಬಿದ್ದರು. ಅದು ಲೈವ್​​ನಲ್ಲಿ ಪ್ರಸಾರವಾಯಿತು. ಅವರ ಪಕ್ಕದಲ್ಲೇ ಕುಳಿತಿದ್ದ ಆ್ಯಂಕರ್​ ಅದನ್ನು ನೋಡಿ ಕ್ಷಣಕ್ಕೆ ಶಾಕ್ ಆದರೂ, ಸಾವರಿಸಿಕೊಂದು ಬ್ರೇಕ್ ಕೇಳಿದ್ದಾರೆ.

ಇದರ ಸಣ್ಣ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಸಿಕ್ಕಾಪಟೆ ನಗುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪಾಕಿಸ್ತಾನ ಚಾನಲ್​ ಸ್ಟುಡಿಯೋದಲ್ಲಿ ಕಳಪೆ ಮಟ್ಟದ ಕುರ್ಚಿ ಹಾಕಲಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. (ಎಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net