ಪಂಡಿತ ಪುಟ್ಟರಾಜ ಸಾಹಿತ್ಯ ಪುರಸ್ಕಾರಕ್ಕೆ ಪುಸ್ತಕ ಆಹ್ವಾನ

Puttaraja
Published on

ಗದಗ: ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯು ಕಳೆದ 23 ವರ್ಷಗಳಿಂದ ನೀಡುತ್ತಿರುವ ರಾಜ್ಯಮಟ್ಟದ ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರಕ್ಕೆ 2023-24 ಸಾಲಿನಲ್ಲಿ ಪ್ರಕಟವಾದ, ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ.

ಪ್ರಶಸ್ತಿಯು 5 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಗೆ ಆಯ್ಕೆಯಾದ ಕೃತಿ ಕರ್ತರಿಗೆ ಡಾ. ಪಂ. ಪುಟ್ಟರಾಜರ ಪುಣ್ಯಸ್ಮರಣೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಮತ್ತು ಇದೇ ಸಂದರ್ಭದಲ್ಲಿ ಪ್ರಶಸ್ತಿಗೆ ಸಮೀಪದ ಪ್ರತಿಸ್ಪರ್ಧಿ 10 ಕೃತಿಗಳನ್ನು ಗುರುತಿಸಿ ವರ್ಷದ ಶ್ರೇಷ್ಠ ಕೃತಿ ರತ್ನ ಸಮ್ಮಾನ ನೀಡಿ ಗೌರವಿಸಲಾಗುವುದು ಎಂದು ಸೇವಾ ಸಮಿತಿಯ ಸಂಚಾಲಕರಾದ ಡಾ. ಸುಮಾ ಹಡಪದ ತಿಳಿಸಿದ್ದಾರೆ.

ಆಸಕ್ತ ಲೇಖಕರು ತಮ್ಮ ಭಾವಚಿತ್ರ ಸಹಿತ ಪರಿಚಯ ಪತ್ರ, 2023 ಏ.1 ರಿಂದ 2024 ಮಾ.31 ರ ಒಳಗಾಗಿ ಪ್ರಕಟವಾದ 3 ಕೃತಿಗಳೊಂದಿಗೆ ಜು.10 ರೊಳಗಾಗಿ ತಲುಪುವಂತೆ ಕಳಿಸಿಕೊಡಬೇಕು. ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ : ಸಿ.ಕೆ.ಹೆಚ್, ಶಾಸ್ತ್ರೀ (ಕಡಣಿ), ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಆಯ್ಕೆ ಸಮಿತಿ, ಗಿರಿಜಾ ನಿವಾಸ, ಪಂಚಾಕ್ಷರಿ ನಗರ, 3ನೇ ಅಡ್ಡರಸ್ತೆ, ಗದಗ-582101.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net