More

  ಕಾಶಿ ಪೀಠದ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಪ್ರವೇಶಕ್ಕೆ ಅರ್ಜಿ ಆಹ್ವಾನ

  ವಾರಾಣಸಿ : ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಉತ್ತರಪ್ರದೇಶದ ಕಾಶಿ ಜ್ಞಾನ ಸಿಂಹಾಸನ ಪೀಠದಲ್ಲಿರುವ ಪ್ರಾಚೀನ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

  ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ನೀಲನಕ್ಷೆಯಂತೆ ಕಾಶಿ ಪೀಠದ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲವು ವೀರಶೈವ ಮಠ-ಪೀಠಗಳಿಗೆ ವಿವಿಧ ಮಠಾಧೀಶರನ್ನು, ಜಗದ್ಗುರುಗಳನ್ನು ಹಾಗೂ ಖ್ಯಾತ ವಿದ್ವಾಂಸರನ್ನು ನಾಡಿಗೆ ನೀಡಿದ್ದು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಗುರುಕುಲದ ಶತಮಾನೋತ್ಸವದಲ್ಲಿ ಪಾಲ್ಗೊಂಡಿದ್ದರು.

  ಈ ಗುರುಕುಲದಲ್ಲಿ ಹಿಂದಿ ಮತ್ತು ಸಂಸ್ಕೃತ ಭಾಷೆಗಳ ಜೊತೆಗೆ ಭಾರತೀಯ ಪ್ರಾಚೀನ ಶಾಸ್ತ್ರಗಳಾದ ನ್ಯಾಯ, ವ್ಯಾಕರಣ, ವೇದಾಂತ, ಸಾಹಿತ್ಯ ಮೊದಲಾದ ವಿಷಯಗಳನ್ನು ತಜ್ಞ ವಿದ್ವಾಂಸರು ಬೋಧಿಸಲಿದ್ದಾರೆ.

  ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿರುವ ವೀರಶೈವ ಧರ್ಮದ ವಿಭಿನ್ನ ಮಠಗಳ ಮರಿದೇವರು, ಉತ್ತರಾಧಿಕಾರಿಗಳು ವಟುಗಳು ಮತ್ತು ವಿದ್ಯಾರ್ಥಿಗಳು ಗುರುಕುಲ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು. 8ನೇ ತರಗತಿ ಅಥವಾ 10 ನೇ ತರಗತಿಗಳಲ್ಲಿ ಸಂಸ್ಕೃತ ವಿಷಯವನ್ನು ತೆಗೆದುಕೊಂಡು ಉತ್ತೀರ್ಣರಾದವರು ಅಥವಾ ಕರ್ನಾಟಕದ ಸಂಸ್ಕೃತ ಪರೀಕ್ಷೆಗಳಲ್ಲಿ ಪ್ರಥಮ ಇಲ್ಲವೆ ಕಾವ್ಯ ಪರೀಕ್ಷೆಗಳನ್ನು ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ.

  ಅರ್ಜಿಯಲ್ಲಿ ಪೂರ್ಣ ಹೆಸರು, ಅಂಚೆ ವಿಳಾಸ, ವೈಯಕ್ತಿಕ ವಿವರಗಳು, ದೂರವಾಣಿ ಸಂಖ್ಯೆಗಳನ್ನು ನಮೂದಿಸಬೇಕು. ಅರ್ಜಿಯ ಜೊತೆಗೆ ಪೂರ್ವಾಧ್ಯಯನದ ಪ್ರಮಾಣ ಪತ್ರ ಮತ್ತು ಆಧಾರ ಕಾರ್ಡ್​ ಲಗತ್ತಿಸಬೇಕು. ಜೂ.25 ರೊಳಗಾಗಿ ಅರ್ಜಿಯನ್ನು ‘ಶ್ರೀಶೈಲ ಶಾಸ್ತಿçಗಳು, ಪ್ರಾಚಾರ್ಯರು, ಶ್ರೀ ಸಿದ್ದಲಿಂಗ ಶಿವಾಚಾರ್ಯ ವೇದಾಗಮ ಸಂಸ್ಕೃತ ಪಾಠಶಾಲೆ, ಶ್ರೀಕ್ಷೇತ್ರ ಯಡೂರು – 591213 ತಾ. ಚಿಕ್ಕೋಡಿ, ಜಿ. ಬೆಳಗಾವಿ. (ಮೊ) 9008967789’ ಈ ವಿಳಾಸಕ್ಕೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದವರು ಜು.2 ರಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಯಡೂರ ಕ್ಷೇತ್ರದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕೆಂದು ಕಾಶಿ ಪೀಠದ ಪ್ರಕಟಣೆ ತಿಳಿಸಿದೆ.

  See also  ಬಾಲ ರಾಮನಿಗೆ ಪ್ರಧಾನಿ ಮೋದಿ ಸಾಷ್ಟಾಂಗ ನಮಸ್ಕಾರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts