

ಧಾರವಾಡ: ಸ್ವರ ಸಾಮ್ರಾಟ್ ಪದ್ಮಭೂಷಣ ಪಂ. ಬಸವರಾಜ ರಾಜಗುರು ಅವರ 104೪ನೇ ಜನ್ಮದಿನಾಚರಣೆ ಹಾಗೂ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಸಂಗೀತ ಕಾರ್ಯಕ್ರಮ ನಗರದ ಸೃಜನಾ ರಂಗಮAದಿರದಲ್ಲಿ ಶನಿವಾರ ನಡೆಯಿತು. ಹುಡಾ ಅಧ್ಯಕ್ಷ ಶಾಕೀರ ಸನದಿ ಅವರು ಖ್ಯಾತ ಗಾಯಕ ಪಂ. ವಿನಾಯಕ ತೊರವಿ ಅವರಿಗೆಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿ' ಹಾಗೂ 1 ಲಕ್ಷ ರೂ. ನಗದು, ನಗರದ ಖ್ಯಾತ ಸಿತಾರ ವಾದಕ ಡಾ. ಮೊಹಸಿನ್ ಖಾನ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿಶಾಲ ಹೆಗಡೆ ಅವರಿಗೆ `ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಯುವ ಪ್ರಶಸ್ತಿ' ಮತ್ತು 25,000 ರೂಪಾಯಿ ನಗದು ನೀಡಿ ಗೌರವಿಸಿದರು.
ಪಂ. ಎಂ. ವೆಂಕಟೇಶ ಕುಮಾರ, ಭಾರತಿದೇವಿ ರಾಜಗುರು, ಪ್ರೊ. ಐ.ಜಿ. ಸನದಿ, ಪಂ. ಗಣಪತಿ ಭಟ್ ಹಾಸನಗಿ, ನಿಜಗುಣ ರಾಜಗುರು, ಡಾ. ಜಿ.ಎಂ. ಹೆಗಡೆ, ಡಾ. ವೀರಣ್ಣ ರಾಜೂರ, ಕುಮಾರ ಬೆಕ್ಕೇರಿ, ಇತರರಿದ್ದರು.