ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ!

Untitled design - 2025-09-21T180526.672
Published on

ಬಾಗಲಕೋಟೆ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಡೆದ ದಿಢೀರ್​ ಬೆಳವಣಿಗೆಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನ ಪೀಠದಿಂದ ಭಾನುವಾರ ಉಚ್ಛಾಟನೆ ಮಾಡಲಾಗಿದೆ. ಪಂಚಮಸಾಲಿ ಟ್ರಸ್ಟ್​ನ ಕಾರ್ಯಕಾರಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸ್ವಾಮೀಜಿ ಬಗ್ಗೆ ಸಾಕಷ್ಟು ದೂರುಗಳು ಇವೆ. ಟ್ರಸ್ಟ್​ನ ಮಾತು ಕೇಳಲ್ಲ, ಅವರ ವಿರುದ್ಧ ದೊಡ್ಡ ಫೈಲ್ ಇದೆ. ಅದಕ್ಕೆ ಇವತ್ತು ಅವರನ್ನ ಪೀಠದಿಂದ ಉಚ್ಛಾಟಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಕೂಡಲಸಂಗಮದಲ್ಲಿ ಮಾಧ್ಯಮಗಳ ಎದುರು ಟ್ರಸ್ಟಿಗಳ ತೀರ್ಮಾನವನ್ನು ಟ್ರಸ್ಟ್ ಕಾರ್ಯದರ್ಶಿ ನೀಲಕಂಠ ಅಸೂಟಿ ಪ್ರಕಟಿಸಿದರು.

ಸಮಾಜ ಒಡೆಯುವ ಕೆಲಸ ಮಾಡ್ತಿದ್ದಾರೆ

ಅವರ ವಿರುದ್ಧ ದೂರಗಳ ಪಟ್ಟಿ ಬಹಳ ಇದೆ. ಅದನ್ನು ಇಲ್ಲಿ ಬಹಿರಂಗ ಪಡೆಸಲು ಆಗಲ್ಲ. ಸ್ವಾಮೀಜಿ ತಮಗೆ ಸ್ವಂತ ಆಸ್ತಿ ಮಾಡಿಕೊಳ್ಖಬಾರದು ಅಂತ ನಮ್ಮ‌ ಬೈಲಾದಲ್ಲಿ ಇದೆ. ಆದರೆ, ಸ್ವಾಮೀಜಿ ಸ್ವಂತಕ್ಕೆ ಆಸ್ತಿ ಮಾಡಿದ್ದಾರೆ. ಸಮಾಜ ಸಂಘಟನೆ ಬದಲಿಗೆ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಣಕಾಸು ವಿಚಾರದಲ್ಲಿ ಹತ್ತಾರು ದೂರುಗಳು ಇವೆ. ಈ ಬಗ್ಗೆ ಸ್ವಾಮೀಜಿಗೆ ಹಿಂದೆ 2014ರಲ್ಲೆ ನೋಟಿಸ್ ಕೊಟ್ಟಿದ್ದೇವು. ಇವತ್ತು ಕೂಡಲಸಂಗಮದಲ್ಲಿ ನಡೆದ ಟ್ರಸ್ಟಿಗಳ ಸಭೆಯಲ್ಲಿ ಸ್ವಾಮೀಜಿಯನ್ನ ಪೀಠದಿಂದ ಉಚ್ಛಾಟಿಸಲು 30 ಜನಟ್ರಸ್ಟಿಗಳ ಪೈಕಿ ಬಹುಮತದ ಟ್ರಸ್ಟಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net