

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂದು ಅನೇಕ ಸಮಯದಿಂದ ಮಠಾಧಿಪತಿಗಳು ಆಗ್ರಹ ಮಾಡುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಮಾತ್ರ ಮಣಿಯುತ್ತಿಲ್ಲ. ಹಿಂದೆ ಪಂಚಮಸಾಲಿ ನಿಯೋಗ ಮುಖ್ಯಮಂತ್ರಿ ಬೊಮ್ಮಾಯಿಯನ್ನು ಭೇಟಿ ಮಾಡಿತ್ತು.
ಈಗ 2ಎ ಮೀಸಲಾತಿಗಾಗಿ ಆಗ್ರಹಿಸಿ ತೀವ್ರಗೊಂಡ ಪಂಚಮಸಾಲಿ ಸಮಾಜದ ಹೋರಾಟ ಮಾಡುತ್ತಿತ್ತು. ಈಗ ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಪಂಚಮಸಾಲಿ ಸಂಘಟನೆಯ ರಾಜ್ಯ ಕಾರ್ಯಕಾರಣಿ ಸಭೆ ಮುಕ್ತಾಯಗೊಂಡಿದೆ.
ಸಭೆಯ ನಂತರ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನಿಡಿದ್ದು 'ರಾಜ್ಯ ಕಾರ್ಯಾಕಾರಣಿಯಲ್ಲಿ ಡಿಸೆಂಬರ್22 ರಂದು ಪಂಚಶಕ್ತಿ ವಿರಾಟ ಸಮಾವೇಶಕ್ಕೆ ನಿರ್ಧಾರ ಮಾಡಲಾಗಿದೆ. ಸಿಎಂ ಕೊಟ್ಟ ಭರವಸೆಯಂತೆ ಡಿಸೆಂಬರ್ 19 ರ ಒಳಗೆ ಮೀಸಲಾತಿ ಘೋಷಣೆ ಮಾಡಬೇಕು' ಎಂದಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧ ಹೊರ ವಲಯದಲ್ಲಿ ಸಮಾವೇಶ ನಡೆಸಲು ಚಿಂತಿಸಲಾಗಿದ್ದು ಮುಖ್ಯಮಂತ್ರಿಗಳು ಭರವಸೆ ಈಡೇರಿಸಿದರೆ ವಿರಾಟ ಸಮಾವೇಶ ದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಗೆ ಸನ್ಮಾನ ಮಾಡಲು ಉದ್ದೇಶಿಸಲಾಗಿದೆ.
'ಎಲ್ಲಾದರೂ ಮೀಸಲಾತಿ ಘೋಷಣೆ ಮಾಡದಿದ್ದರೆ ಪಂಚಮಸಾಲಿ ಸಮಾಜದ ಶಕ್ತಿ ಪ್ರದೇಶನ ಮಾಡ್ತಿವಿ. ಇದೇ 19 ರಂದು ಸವದತ್ತಿ ಯಲ್ಲಿ ಮೀಸಲಾತಿ ಸಮಾವೇಶವಿದೆ. ಮೀಸಲಾತಿ ಕೊಟ್ಟರೆ ಸವದತ್ತಿಯಿಂದ ವಿಜಯೋತ್ಸವ ಮಾಡ್ತಿವಿ. ಮೀಸಲಾತಿ ಕೊಡದಿದ್ದರೆ ಸವದತ್ತಿ ಯಿಂದ ಪಾದಯಾತ್ರೆ ಆರಂಭ ಮಾಡ್ತಿವಿ' ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಈ ಪಾದಯಾತ್ರೆಯ ಸ್ವರೂಪವನ್ನೂ ಈಗಾಗಲೇ ನಿರ್ಧರಿಸಲಾಗಿದ್ದು ಸವದತ್ತಿಯಿಂದ ಬೆಳವಾಡಿ, ಕಿತ್ತೂರು, ಹಿರೇಬಾಗೇವಾಡಿಯಲ್ಲಿ ಪಾದಯಾತ್ರೆ ನಡೆಯಲಿದೆ. ಮುಖ್ಯಮಂತ್ರಿ ಕೊಟ್ಟ ಮಾತನ್ನು ತಪ್ಪಿದಲ್ಲಿ 22 ರಂದು ಪಾದಯಾತ್ರೆ ಹಿರೇಬಾಗೇವಾಡಿ ಯಿಂದ ಬೆಳಗಾವಿ ಸುವರ್ಣ ವಿಧಾನಸೌಧದ ಬಳಿಯ ಪ್ರತಿಭಟನಾ ವೇದಿಕೆಗೆ ಬಂದು ತಲುಪಲಿದೆ.
'ಮೀಸಲಾತಿ ಕೊಡದಿದ್ದರೆ ಉಗ್ರ ಹೋರಾಟದ ಮಾಡ್ತಿವಿ. ಪಂಚಶಕ್ತಿ ವಿರಾಟ ಸಮಾವೇಶ ದಲ್ಲಿ ರಾಜ್ಯದ ಮೂಲೆಮೂಲೆಯಿಂದ 25 ಲಕ್ಷ ಜನರು ಆಗಮಿಸಲಿದ್ದಾರೆ' ಎಂದು ಸ್ವಾಮೀಜಿ ಹೇಳಿದ್ದಾರೆ.