

ಭರತಭೂಮಿಯು ಪುಣ್ಯಭೂಮಿ. ಭಾರತದ ಯಾವ ಮೂಲೆಗೆ ಹೋದರೂ ಅಲ್ಲೊಂದು ತೀರ್ಥಕ್ಷೇತ್ರವಿರುತ್ತದೆ. ಪರಶಿವನ ಸಂಬಂಧವಾಗಿ ದ್ವಾದಶ ಜ್ಯೋತಿರ್ಲಿಂಗಗಳು ಇರುವುದು ನಮಗೆಲ್ಲ ತಿಳಿದೇ ಇದೆ. ಅದರ ಜೊತೆಜೊತೆಗೆ ಹಿಮಾಲಯದ ಪ್ರದೇಶದಲ್ಲಿ ಕೇದಾರ ಹಾಗೂ ಬದರೀಕ್ಷೇತ್ರಗಳ ಮಧ್ಯದಲ್ಲಿ ಪಂಚಕೇದಾರ ಎಂಬ ಐದು ತೀರ್ಥಸ್ಥಾನಗಳಲ್ಲಿವೆ. ಅವು ಕೇದಾರ, ತುಂಗನಾಥ, ರುದ್ರನಾಥ, ಮಧ್ಯಮಹೇಶ್ವರ, ಕಲ್ಪೇಶ್ವರ ಎಂಬ ಪಂಚ ಕೇದಾರಗಳಿವೆ.
ಅದರ ಬೆನ್ನಿನ ಮೇಲುಭಾಗವೇ ಕೇದಾರೇಶ್ವರ. ಮುಂದಿನ ಕಾಲುಗಳು ತುಂಗನಾಥದಲ್ಲಿ, ಮುಖವು ರುದ್ರನಾಥದಲ್ಲಿ, ಹೊಟ್ಟೆಯ ಭಾಗವು ಮಧ್ಯ ಮಹೇಶ್ವರದಲ್ಲಿ, ಜಟೆ ಕಲ್ಪೇಶ್ವರದಲ್ಲಿ ಲಿಂಗರೂಪದಲ್ಲಿ ಆವಿರ್ಭವಿಸಿತು. ಯಾತ್ರಾರ್ಥಿಗಳು ಈ ಪಂಚ ಕೇದಾರವನ್ನು ದರ್ಶಿಸಿ, ಅರ್ಚಿಸಿ, ಪುನೀತರಾಗುವರು.