

ಗಣರಾಜ್ಯೋತ್ಸವದ ನಿಮಿತ್ತ ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿನ ಪ್ಲಾಂಕ್ ಚಾಲೆಂಜ್ನಲ್ಲಿ 2400 ಜನ ಭಾಗವಹಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಯಾಗಿದೆ.
ಬಜಾಜ್ ಸಂಸ್ಥೆ ಆಯೋಜಿಸಿದ್ದ ಈ ಪ್ಲಾಂಕಥಾನ್ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ಇಷ್ಟೊಂದು ಜನ ವ್ಯಾಯಾಮದ ನಿರ್ದಿಷ್ಟ ಭಂಗಿಯಲ್ಲಿದ್ದುಕೊಂಡು ಹೊಸ ದಾಖಲೆ ನಿರ್ವಿುಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್, ಕ್ರೀಡಾಪಟುಗಳಾದ ಮಿಥಾಲಿ ರಾಜ್, ಮೇರಿ ಕೋಮ್ ದ್ಯುತಿ ಚಂದ್ ಮುಂತಾದವರು ಪಾಲ್ಗೊಂಡಿದ್ದರು. ಕಳೆದ ವರ್ಷ ಪುಣೆಯಲ್ಲಿ ನಡೆದಿದ್ದ ಇದೇ ಕಾರ್ಯಕ್ರಮದಲ್ಲಿ 1353 ಜನ ಭಾಗವಹಿಸಿ ದಾಖಲೆ ಮಾಡಿದ್ದರು.