

ನವದೆಹಲಿ: ಪಾಕಿಸ್ತಾನಿ ಟಿಕ್ಟಾಕ್ ಬೆಡಗಿ ಅಲಿಜಾ ಸೆಹರ್ಳ ಖಾಸಗಿ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ. ಆದರೆ ಈ ವಿಡಿಯೋ ನಕಲಿ ಎಂದು ಆಕೆ ಹೇಳಿದ್ದಾರೆ.
ಷಿಯಲ್ ಮೀಡಿಯಾ ಎಷ್ಟು ಒಳ್ಳೆಯದೋ ಅಷ್ಟೇ ತೊಂದರೆಗಳನ್ನು ಸಹ ಹರಡುತ್ತದೆ. ಇತ್ತೀಚೆಗೆ ಸೆಲೆಬ್ರಿಟಿಗಳ ಖಾಸಗಿ ವೀಡಿಯೊಗಳು ಸೋರಿಕೆಯಾಗುತ್ತಿವೆ. ಆದರೆ ಅವರೆಲ್ಲರೂ ಇದನ್ನು AI ಮೂಲಕ ಮಾಡಲಾಗಿದೆ ಮತ್ತು ನಕಲಿ ಎಂದು ಹೇಳುತ್ತಾರೆ.
ಇದೀಗ ಅಲಿಜಾ ಸಹರ್ ಖಾಸಗಿ ವೀಡಿಯೊ ಸೋರಿಕೆಯಾದ ನಂತರ ಸೈಬರ್ ಭದ್ರತೆ ಮತ್ತೊಮ್ಮೆ ಪ್ರಶ್ನಾರ್ಹವಾಗಿದೆ. ಆಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಅನೇಕ ನೆಟ್ಟಿಗರು ಜಾಲತಾಣಗಳನ್ನು ಜಾಲಾಡಿದರು. ಕಡೆಗೆ ಇದು ವೈರಲ್ ಆಯಿತು. ಬಳಿಕ ಅಲಿಜಾ ಸಹರ್ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಯ ಸೈಬರ್ ಕ್ರೈಮ್ಗೆ ದೂರು ಕೊಟ್ಟಿದ್ದಾರೆ. ಕತಾರ್ ವಾಸಿ ಯೊಬ್ಬನನ್ನು ವೀಡಿಯೊ ಸೋರಿಕೆ ಸಂಬಂಧ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದರು.
ಅಲಿಜಾ ಸಹರ್ ಯಾರು?: ಅಲಿಜಾ ಸಹರ್ ತನ್ನ ಕುಟುಂಬಕ್ಕೆ ಸಹಾಯ ಮಾಡುವುದರಿಂದ ಹಿಡಿದು ಮಣ್ಣಿನ ಒಲೆಯಲ್ಲಿ ಅಡುಗೆ ಮಾಡುವವರೆಗೆ ನಿತ್ಯ ಬದುಕಿನ ಘಟನೆಗಳನ್ನು ವೀಡಿಯೋ ಮಾಡಿ ನೆಟ್ನಲ್ಲಿ ಹಂಚಿಕೊಳ್ಳುತ್ತಿದ್ದಳು. ಅಭಿಮಾನಿಗಳು ಆಕೆಯ ಸರಳತೆಯನ್ನು ತುಂಬಾ ಇಷ್ಟಪಡುತ್ತಿದ್ದರು. ಆಕೆ ಇನ್ಸ್ಟಾಗ್ರಾಮ್ನಲ್ಲಿ 401K ಅನುಯಾಯಿಗಳನ್ನು ಹೊಂದಿದ್ದಾರೆ.
ಕೆಲವು ದಿನಗಳ ಹಿಂದೆ, ಸಹರ್ ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು, ಆದರೆ ಆಕೆಯ ಸಹೋದರ ಇದು ಸುಳ್ಳು ಎಂದು ಸ್ಪಷ್ಟನೆ ನೀಡಿದ.
ಸೆಲೆಬ್ರೆಟಿಗಳ ಖಾಸಗಿ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗುವುದು ಇದು ಮೊದಲಲ್ಲ. ಪಂಜಾಬ್ನ ಸಹಜ್ ಅರೋರಾ ಮತ್ತು ಅವರ ಪತ್ನಿ ಗುರ್ಪ್ರೀತ್ ಕೌರ್, ಕುಲ್ಹರ್ ಪಿಜ್ಜಾ ಕಪಲ್ ಎಂದು ಪ್ರಸಿದ್ಧರಾಗಿದ್ದಾರೆ. ಯೂಟ್ಯೂಬರ್ಗಳಾದ ಕರ್ಮಿತಾ ಕೌರ್ ಮತ್ತು ಪ್ರೀತ್ ರಾಂಧವಾ, ಬಾಂಗ್ಲಾದೇಶದ ಯೂಟ್ಯೂಬರ್ ಜನ್ನತ್ ತೋಹಾ ಸೇರಿ ಅನೇಕ ಸೆಲೆಬ್ರಿಟಿಗಳು ತಮ್ಮ ಸೋರಿಕೆಯಾದ ಎಂಎಂಎಸ್ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದಾರೆ.