ಒಂದೇ ಕೋಣೆಯಲ್ಲಿ ಕ್ರಿಕೆಟಿಗ ಚಾಹಲ್ ಪತ್ನಿ ಧನಶ್ರೀ- ಶ್ರೇಯಸ್ ಅಯ್ಯರ್!

dhanashree -shreyas
Published on

ಮುಂಬೈ: ಭಾರತೀಯ ಕ್ರಿಕೆಟಿಗ ಚಹಾಲ್ ಅವರ ಪತ್ನಿ ಧನಶ್ರೀ ಮತ್ತು ಸ್ಟಾರ್ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರು ಒಂದೇ ಕೋಣೆಯಲ್ಲಿ ಕಾಣಿಸಿಕೊಂಡಿದ್ದು, ಇವರಿಬ್ಬರ ನಡುವಿನ ಸಂಬಂಧ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಕ್ರಿಕೆಟಿಗನ ಪತ್ನಿಯನ್ನು ಅಪಹರಿಸಿ ಮದುವೆಯಾಗುವುದು ಭಾರತೀಯ ಕ್ರಿಕೆಟ್‌ಗೆ ಹೊಸದೇನಲ್ಲ. ತಮಿಳುನಾಡಿನ ಕ್ರಿಕೆಟಿಗ ಮುರಳಿ ವಿಜಯ್ ತನ್ನ ಸಹೋದ್ಯೋಗಿ ದಿನೇಶ್ ಕಾರ್ತಿಕ್ ಅವರ ಪತ್ನಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಅದೇ ರೀತಿ ದಿಲ್ಶಾನ್ ಅವರ ಪತ್ನಿಯನ್ನು ಸಹ ಕ್ರಿಕೆಟಿಗ ತರಂಗfe ಅಪಹರಿಸಿ ಶ್ರೀಲಂಕಾದಲ್ಲಿ ವಿವಾಹವಾಗಿದ್ದರು. ಹೀಗಿರುವಾಗ ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೆ ಇಂತಹ ಘಟನೆ ಮರುಕಳಿಸಲಿದೆಯೇ ಎಂಬ ಅನುಮಾನ ಸಾರ್ವಜನಿರನ್ನು ಕಾಡುತ್ತಿದೆ.

ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಚಾಹಲ್ ಅವರು ಧನಶ್ರೀ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಆದರೆ ಧನಶ್ರೀ ಇತ್ತೀಚೆಗೆ ಶ್ರೇಯಸ್ ಅಯ್ಯರ್‌ಗೆ ತುಂಬಾ ಹತ್ತಿರವಾಗಿದ್ದಾರೆ. ಅಚರಿಬ್ಬರು ಜೊತೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಪ್ರಕಟವಾಗುತ್ತಿರುತ್ತವೆ. ಇವರಿಬ್ಬರು ಒಟ್ಟಿಗೆ ಸುತ್ತಾಡುತ್ತಿರುವುದು ಕೂಡ ಪತ್ತೆಯಾಗಿದೆ.

ಇತ್ತೀಚೆಗೆ ಧನಶ್ರೀ ಮತ್ತು ಶ್ರೇಯಸ್ ಪ್ರತ್ಯೇಕವಾಗಿ ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಪೋಸ್ಟ್​ಗಳು ವಿವಾದಕ್ಕೆ ಕಾರಣವಾಗಿದೆ. ಧನಶ್ರೀ ಮುಂಬೈನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನ ಕೊಣೆಯಲ್ಲಿ ತಾನಿರುವ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ ಅದೇ ಸ್ಥಳದಿಂದ ತಾನಿರುವ ಚಿತ್ರವನ್ನು ತೆಗೆದು ತನ್ನ ಇನ್ಸ್ಟಾಗ್ರಾಮ್​ನ ಪೋಸ್ಟ್ ಮಾಡಿದ್ದಾರೆ.

ಇದನ್ನು ನೋಡಿದ ಅಭಿಮಾನಿಗಳು, ಎರಡು ಕಟ್ಟಡಗಳು ಒಂದೇ ಆಗಿರುವುದು ನೋಡಿದರೆ, ಇಬ್ಬರೂ ಒಂದೇ ಕಡೆಯಿದ್ದು, ಪ್ರತ್ಯೇಕವಾಗಿ ಫೋಟೋ ತೆಗೆದು ಪೋಸ್ಟ್ ಮಾಡಿದ್ದಾರೆ ಎಂದು ಕಾಮೆಂಟ್​ ಮಾಡಿದ್ದಾರೆ. ಚಾಹಲ್ ತನ್ನ ಹೆಂಡತಿಯನ್ನು ಹದ್ದುಬಸ್ತಿನಲ್ಲಿಡಬೇಕು ಅಥವಾ ಆಕೆ ಇಷ್ಟದಂತೆ ಬಿಟ್ಟಾಕಬೇಕು. ಸಂಬಂಧ ಗಟ್ಟಿಯಾಗಿರದಿದ್ದರೆ ಜೊತೆಯಾಗಿರುವುದರಲ್ಲಿ ಅರ್ಥವಿಲ್ಲ ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಶ್ರೇಯಸ್ ಏಕೆ ಈ ರೀತಿಯ ಕೊಳಕು ಕೆಲಸ ಮಾಡುತ್ತಿದ್ದಾನೆ ಎಂದು ಹಲವರು ಕಿಡಿಕಾರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net