ಈ ಕುಟುಂಬದ 9 ಜನರದ್ದೂ ಒಂದೇ ದಿನ ಹುಟ್ಟುಹಬ್ಬ! ಇದು ಹೇಗೆ ?

Pakistani family holds world record for sharing same birthday
Published on

ಪಾಕಿಸ್ತಾನ: ಕುಟುಂಬದಲ್ಲಿ ಎರಡು ಜನ್ಮದಿನಗಳು ಒಂದೇ ದಿನದಲ್ಲಿದ್ದರೆ, ನಾವು ಆಶ್ಚರ್ಯ ಪಡುತ್ತೇವೆ. ಒಂದು ಕುಟುಂಬದಲ್ಲಿ ಎಲ್ಲರೂ ಒಂದೇ ದಿನದಲ್ಲಿ ಜನಿಸಿದರೆ? ಎಲ್ಲರೂ ತಮ್ಮ ಹುಟ್ಟುಹಬ್ಬವನ್ನು ಒಂದೇ ದಿನ ಆಚರಿಸಿದರೆ ಹೇಗೆ? ವಿಸ್ಮಯ ಅಲ್ಲವೇ.. ಹೀಗೆ ಇಲ್ಲೊಂದು ಕುಟುಂಬ ವಿಶ್ವ ದಾಖಲೆ ಮಾಡಿದೆ.

ಪಾಕಿಸ್ತಾನದ ಲರ್ಕಾನಾದ ನಿವಾಸಿಗಳಾದ ಅಮೀರ್ ಮತ್ತು ಖುದಿಜಾ ಅವರಿಗೆ ಆಗಸ್ಟ್ 1 ವಿಶೇಷ ದಿನವಾಗಿದೆ. ಅವರ ಕುಟುಂಬದ ಒಂಬತ್ತು ಸದಸ್ಯರಿದ್ದಾರೆ. ಇವರೆಲ್ಲ ಜನ್ಮದಿನಗಳು ಒಂದೇ ದಿನ. ದಂಪತಿ 1991 ರಲ್ಲಿ ತಮ್ಮ ಹುಟ್ಟುಹಬ್ಬದಂದು ವಿವಾಹವಾದರು. ಸರಿಯಾಗಿ ಒಂದು ವರ್ಷದ ನಂತರ ಹಿರಿಯ ಮಗಳು ಸಿಂಧು ಜನಿಸಿದಳು. ಅದರ ನಂತರ, ಆಗಸ್ಟ್ 1 ರಂದು ಸಸುಯಿ-ಸಪ್ನಾ, ಅಮೀರ್-ಅಂಬರ್ ಮತ್ತು ಅಮ್ಮರ್-ಅಹ್ಮರ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದರು. ಒಂದೇ ದಿನದಲ್ಲಿ ಜನಿಸಿದ ಅವಳಿಗಳ ದಾಖಲೆಯನ್ನೂ ಅವರು ಹೊಂದಿದ್ದಾರೆ.

ಆದರೆ ಒಂದೇ ದಿನದಲ್ಲಿ ಮಕ್ಕಳು ಹುಟ್ಟುವ ಯೋಜನೆ ಹಾಕಿಕೊಂಡಿರಲಿಲ್ಲ. ಇದೆಲ್ಲ ಸಹಜವಾಗಿ ನಡೆದಿದೆ ಎಂದು ಅಮೀರ್ ಮತ್ತು ಖುದಿಜಾ ದಂಪತಿ ಹೇಳಿದ್ದಾರೆ.

ಎಲ್ಲಾ ಮಕ್ಕಳು ಸಾಮಾನ್ಯ ಹೆರಿಗೆಯಿಂದ ಜನಿಸಲ್ಪಟ್ಟಿವೆ. ಮತ್ತು ಆಗಸ್ಟ್ 1 ಬಂತೆಂದರೆ ಅವರ ಕುಟುಂಬದಲ್ಲಿ ದೊಡ್ಡ ಸಂಭ್ರಮ. 9 ಮಂದಿ ಸೇರಿ ಕೇಕ್ ಕತ್ತರಿಸುತ್ತೇವೆ. ಈ ವಿಶ್ವ ದಾಖಲೆಯನ್ನು ಸಾಧಿಸಲು ತುಂಬಾ ಸಂತೋಷವಾಗಿದೆ ಎಂದು ಕುಟುಂಬದವರು ಹೇಳುತ್ತಾರೆ. ಇದು ನಿಜಕ್ಕೂ ಅಪರೂಪದ ಸಂಗತಿ.. ಆ ಕುಟುಂಬದ ಸಾಧನೆ ಕಂಡು ಅವರ ಬಂಧುಗಳು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net