ಹುಟ್ಟುಹಬ್ಬದಂದು ಟೊಮ್ಯಾಟೋ ಗಿಫ್ಟ್: ಕಾಸ್ಟ್ಲಿಉಡುಗೊರೆ ಪಡೆದ ಬರ್ತಡೇ ಗರ್ಲ್​​ ಹೇಳಿದ್ದೇನು?

Maharashtra Woman Thrilled At Getting Tomatoes As A Birthday Gift
Published on

ಮಹರಾಷ್ಟ್ರ: ದೇಶಾದ್ಯಂತ ಟೊಮ್ಯಾಟೋ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಮಹಾರಾಷ್ಟ್ರಲ್ಲೂ ಟೊಮ್ಯಾಟೋ ಕೆಜಿಗೆ 140 ರೂ. ಕ್ಕಿಂತಲೂ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಅನುಗುಣವಾಗಿ ಟೊಮ್ಯಾಟೊ ಬೆಲೆ ಬದಲಾಗುತ್ತಿದ್ದರೂ, ಪ್ರಸ್ತುತ 140-180 ರೂ. ಇದೆ. ಹೀಗಿರುವಾಗ ಟೊಮ್ಯಾಟೋ ಖರೀದಿ ಮಾಡಲು ಜನರು ಹಿಂದೆಮುಂದೆ ನೋಡುವಂತಾಗಿದೆ.

ಜನ್ಮದಿನ ಎಂದರೆ ವಿವಿಧ ಉಡುಗೊರೆಯಾಗಿ ಹೂವು, ಟೆಡ್ಡಿ ಬೇರ್, ಚಾಕೊಲೇಟ್ ನೀಡಲಾಗುತ್ತದೆ. ಬೆಳ್ಳಿ ಮತ್ತು ಚಿನ್ನವನ್ನು ಆಯಾ ಮಟ್ಟಕ್ಕೆ ಅನುಗುಣವಾಗಿ ಉಡುಗೊರೆಯಾಗಿ ನೀಡಲಾಗುತ್ತದೆ. ಆದರೆ ನೀವು ಇತ್ತೀಚೆಗೆ ಯಾರಿಗಾದರೂ ದುಬಾರಿ ಉಡುಗೊರೆಯನ್ನು ನೀಡಲು ಬಯಸಿದ್ದೀರಾ? ಹಾಗಿದ್ರೆ ಟೊಮ್ಯಾಟೋವನ್ನು ಕೊಡಬಹುದು ಎನ್ನುವುದನ್ನು ವ್ಯಕ್ತಿಯೊಬ್ಬರು ಸಾಬೀತು ಪಡಿಸಿದ್ದಾರೆ.

ಕಲ್ಯಾಣ್ ಪ್ರದೇಶದ ಕೊಚಾಡಿಯ ಸ್ಥಳೀಯ ಸೋನಮ್ ಬೋರ್ಸೆ ಎಂಬ ಮಹಿಳೆ ಜುಲೈ 5 ರಂದು ತನ್ನ ಮನೆಯಲ್ಲಿ ತನ್ನ ಸಂಬಂಧಿಕರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಆಕೆಯ ಸಂಬಂಧಿಕರು ಟೊಮ್ಯಾಟೋವನ್ನು ಉಡುಗೊರೆಯಾಗಿ ನೀಡಿದರು. ಸಂಬಂಧಿಕರೆಲ್ಲರೂ 4 ಕೆಜಿಗೂ ಹೆಚ್ಚು ಟೊಮ್ಯಾಟೋಗಳನ್ನು ಉಡುಗೊರೆಯಾಗಿ ನೀಡಿದರು.

ಸೋನಮ್ ಬೋರ್ಸೆ ಮಾತನಾಡಿ, "ನನ್ನ ಹುಟ್ಟುಹಬ್ಬದಂದು ನಾನು ಹಲವಾರು ಉಡುಗೊರೆಗಳನ್ನು ಸ್ವೀಕರಿಸಿದ್ದೇನೆ. ಆದರೆ ನನ್ನ ಸಹೋದರ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ನೀಡಿದ ಉಡುಗೊರೆಗಳಿಂದ ನಾನು ತುಂಬಾ ಸಂತೋಷಗೊಂಡಿದ್ದೇನೆ. ಅವರು ನನಗೆ ಟೊಮ್ಯಾಟೋಗಳನ್ನು ಉಡುಗೊರೆಯಾಗಿ ನೀಡಿದರು. ನನ್ನ ಸಹೋದರ ನನಗೆ 2.15 ಕೆಜಿ ಟೊಮ್ಯಾಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ. ನನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ನನಗೆ ತಲಾ 1 ಕೆಜಿ ಟೊಮ್ಯಾಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆಯನ್ನು ಸ್ವೀಕರಿಸಿದೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net