

ಚಂಡಿಗಢ್: ಪುಲ್ವಾಮ ದಾಳಿ ಮಾಡಿಸಿದ್ದು ನಾವೇ ಎಂದು ಸತ್ಯ ಒಪ್ಪಿಕೊಂಡು, ಜಗತ್ತಿನೆದುರು ಬೆತ್ತಲಾದ ಪಾಕಿಸ್ತಾನ ತನ್ನ ಕಪಟತನವನ್ನು ಬಿಡುತ್ತಿಲ್ಲ.
ಗಡಿಯನ್ನು ದಾಟಿ, ಭಾರತದ ಭೂಪ್ರದೇಶದೊಳಗೆ ನುಸುಳಿದ್ದ ಪಾಕಿಸ್ತಾನಿ ಡ್ರೋಣ್ನ್ನು ಭಾರತೀಯ ಗಡಿ ಭದ್ರತಾ ಪಡೆ ಹಿಮ್ಮೆಟ್ಟಿಸದೆ. ಪಂಜಾಬ್ನ ಠಾಕೂರ್ಪುರ್ ಗ್ರಾಮದ ಬಳಿ ನಿನ್ನೆ ರಾತ್ರಿ 11.35ರಿಂದ ಗುಂಯ್ಗುಡುವ ಶಬ್ದ ಕೇಳಿಬರುತ್ತಿತ್ತು. ಅದು ಪಾಕಿಸ್ತಾನ ಕಡೆಯಿಂದಲೇ ಬರುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿಕೊಂಡ ಸ್ಥಳದಲ್ಲಿದ್ದ ಗಡಿ ಭದ್ರತಾ ಪಡೆಯಾದ ಯೋಧರಾದ ದೇವೇಂದ್ರ ಕುಮಾರ್ ಮತ್ತು ಅಶೋಕ್ ಕುಮಾರ್ ಕೂಡಲೇ ಅಲರ್ಟ್ ಆಗಿ ಒಂದೇ ಸಮ ಫೈರ್ ಮಾಡಲು ಶುರುಮಾಡಿದರು. ನೋಡನೋಡುತ್ತಿದ್ದಂತೆ ಆ ಡ್ರೋಣ್ ಭಾರತದ ಭೂಪ್ರದೇಶವನ್ನು ಪ್ರವೇಶಿಸಿತು. ಆದರೆ ಬಿಎಸ್ಎಫ್ ಯೋಧರ ದಾಳಿಗೆ ಹೆದರಿ ಕೂಡಲೇ ಆ ಡ್ರೋಣ್ ಪಾಕ್ಗೆ ಹಿಂದಿರುಗಿದೆ.
ಆದರೆ ಮತ್ತೆ ಮಧ್ಯರಾತ್ರಿ 12.22ರ ಹೊತ್ತಿಗೆ ಮತ್ತೆ ವಾಪಸ್ ಆಗಿದೆ. ಈ ಸಮಯದಲ್ಲಿ ಅಲ್ಲಿಯೇ ಗಸ್ತು ತಿರುಗುತ್ತಿದ್ದ ಮುಕೇಶ್ ಯಾದವ್, ದೇವೇಂದ್ರ ಮತ್ತು ಅಶೋಕ್ ಕುಮಾರ್ ಮತ್ತೊಮ್ಮೆ ಡ್ರೋನ್ ಎಡೆಗೆ ಗುಂಡಿನ ದಾಳಿ ಮಾಡಿದ್ದಾರೆ.
ಬಿಎಸ್ಎಫ್ನ ಮೂವರು ಸಿಬ್ಬಂದಿಯ ಗುಂಡಿನ ದಾಳಿಗೆ ಮಣಿದ ಪಾಕ್ ಡ್ರೋನ್ ಕೊನೆಗೂ ಹಿಂದಿರುಗಿದೆ. ನಂತರ ಸ್ಥಳಕ್ಕೆ ಬಿಎಸ್ಎಫ್ ಕಮಾಂಡಂಟ್ ಎನ್.ಗಂಗೂಲಿ ಭೇಟಿ ನೀಡಿದ್ದರು.