ನನ್ನ ಪತಿ ಮನುಷ್ಯನಲ್ಲ ಮೃಗ, ಪಾಕ್​ ಟಿವಿ ನಿರೂಪಕನ ವಿರುದ್ಧ ಪತ್ನಿ ಗಂಭೀರ ಆರೋಪ: 15 ಕೋಟಿ ರೂ.ಪರಿಹಾರ ಕೇಳಿ ವಿಚ್ಚೇದನಕ್ಕೆ ಅರ್ಜಿ

Amir Liyakat
Published on

ಇಸ್ಲಮಾಬಾದ್​: ಕಳೆದ ಫೆಬ್ರವರಿಯಲ್ಲಷ್ಟೇ ತನಗಿಂತ ಅರ್ಧ ವಯಸ್ಸಿನ ಯುವತಿಯನ್ನು ವರಿಸಿದ್ದ ರಾಜಕೀಯದಲ್ಲೂ ಗುರುತಿಸಿಕೊಂಡಿರುವ ಪಾಕ್​ ಟಿವಿ ನಿರೂಪಕ ಅಮೀರ್​ ಲಿಯಾಕತ್​ ವಿರುದ್ಧ ಪತ್ನಿ ಗಂಭೀರ ಆರೋಪ ಮಾಡಿ, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

49 ವರ್ಷದ ಅಮೀರ್​ 18 ವರ್ಷದ ಯುವತಿಯನ್ನು ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದನು. ಆದರೆ ಇಬ್ಬರ ನಡುವೆ ಸರಿಬರುತ್ತಿಲ್ಲ, ಟಿವಿ ಪರದೆ ಮೇಲೆ ಕಾಣುವಂತೆ ಇಲ್ಲ ಎಂದು ಡಾನಿಯಾ ಶಾ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಲಿಯಾಕತ್​ ಮೇಲೆ ಕಾಣುವಂತೆ ಒಳ್ಳೆ ವ್ಯಕ್ತಿತ್ವದವನಲ್ಲ, ಮನೆಯಲ್ಲಿ ಕೂಡಿಹಾಕಿ ಹೊಡೆಯುತ್ತಿದ್ದ, ಅಲ್ಲದೇ ಮೆನಕೆಲಸದವರ ಮುಂದೆ ಮರ್ಯಾದೆಯೇ ಕೊಡುತ್ತಿರಲಿಲ್ಲ. ಸದಾ ನಶೆಯಲ್ಲಿದ್ದು, ನನ್ನ ಮೇಲೆ ಹಲ್ಲೆ ಮಾಡುತ್ತಿದ್ದರು. ಸದ್ಯ ನಾನು ಕತ್ತಲೆಯಿಂದ ಬೆಳಕಿಗೆ ಬರಬೇಕೆಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಈತನಿಂದ ಬಿಡುಗಡೆ ಪಡೆಯಬೇಕು. ಇವನ ಜೊತೆ ಬಾಳಲು ನನಗೆ ಇಷ್ಟವಿಲ್ಲ ಎಂದಿರುವ ಡಾನಿಯಾ ಸದ್ಯ ನ್ಯಾಯಾಲಯಕ್ಕೆ ವಿಚ್ಚೇದನ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಲ್ಲದೇ 15 ಕೋಟಿ ರೂ. ಪರಿಹಾರ ನೀಡಬೇಕೆಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net