ಮುಂದಿನ ವಾರ ಹಸೆಮಣೆ ಏರಬೇಕಿದ್ದ ಯುವತಿ ಬಾಳಲ್ಲಿ ವಿಧಿಯಾಟ: ಕಾರು ಪ್ರಪಾತಕ್ಕೆ ಉರುಳಿ ದುರಂತ

Accident
Published on

ಡೆಹ್ರಾಡೂನ್​: ಮುಂದಿನ ವಾರ ಹಸೆಮಣೆ ಏರಬೇಕಿದ್ದ ಯುವತಿಯ ಬಾಳಲ್ಲಿ ವಿಧಿ ಆಟವಾಡಿದೆ. ಮದುವೆಗಾಗಿ ಬಟ್ಟೆಕೊಳ್ಳಲು ಹೋಗುತ್ತಿದ್ದ ವೇಳೆ ಕಾರು ಹಳ್ಳಕೆ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಪಿಂಕಿ (25) ಪ್ರತಾಪ್​ ಸಿಂಗ್​​ (40), ದೇವಿ (36), ವಿಜಯ್​​ (15) ಮತ್ತು ಮಂಜು(12) ಸಾವನ್ನಪ್ಪಿದ್ದಾರೆ. ಮೃತ ಪಿಂಕಿ ಮದುವೆಗಾಗಿ ಬಟ್ಟೆ ಕೊಂಡುಕೊಳ್ಳಲು ಕುಟುಂಬ ನಗರಕ್ಕೆ ಹೊರಟಿತ್ತು. ರಿಷಿಕೇಶ್​ ಮತ್ತು ಬದ್ರಿನಾಥ್​ ದೇವಾಲಯಕ್ಕೆ ಹೋಗುವ ಮಾರ್ಗ ಮಧ್ಯೆ ಟೋಟಘಾಟಿ ಎಂಬಲ್ಲಿ ಇವರು ಚಲಿಸುತ್ತಿದ್ದ ಕಾರು ಪ್ರಪಾತಕ್ಕೆ ಬಿದ್ದಿದೆ. ಘಟನೆಯಲ್ಲಿ ಯುವತಿ ಸೇರಿ ಜೊತೆಯಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭಾನುವಾರ ಬೆಳಗ್ಗೆ 7 ಗಂಟೆಗೆ ಈ ದುರ್ಘಟನೆ ನಡೆದಿದ್ದು, ರಿಷಿಕೇಷ್​ನಿಂದ ಚಮೋಲಿಗೆ ಹೊರಟಿದ್ದರು. ಚಾಲಕನ ನಿಯಂತ್ರಣ ತಪ್ಪಿಕಾರು 250ಮೀ ಆಳದ ಕಂದಕಕ್ಕೆ ಬಿದ್ದಿದೆ.ಸದ್ಯ ಮೃತದೇಹ ಹೊರತೆಗೆಯಲಾಗುತ್ತಿದ್ದು, ತೀವ್ರ ಕಂದಕವಿರುವುದರಿಂದ ಕಾರ್ಯಾಚರಣೆ ಕಷ್ಟವಾಗುತ್ತಿದ್ದು, ಎಲ್ಲರ ಮೃತದೇಹ ಹೊರತೆಗೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net