

ಇಸ್ಲಮಾಬಾದ್: ಭಾರತ ಚೀನಾದ 59 ಆ್ಯಪ್ಗಳನ್ನು ಬ್ಯಾನ್ ಮಾಡಿದ ಬೆನ್ನಲ್ಲೇ, ಪಾಕಿಸ್ತಾನ ಪಬ್ಜಿ ಆನ್ಲೈನ್ ಆಟವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
ಪ್ಲೇಯರ್ ಅನ್ನೌನ್ಸ್ ಬ್ಯಾಟಲ್ ಗ್ರೌಂಡ್ (ಪಬ್ಜಿ) ಸಿಕ್ಕಾಪಟೆ ಟ್ರೆಂಡ್ನಲ್ಲಿರುವ ಆಟ. ಮಕ್ಕಳು, ಯುವಜನತೆ ಈ ಆಟಕ್ಕೆ ಅಡಿಕ್ಟ್ ಆಗಿದ್ದಾರೆ.
ಇದೀಗ ಪಾಕಿಸ್ತಾನ ಟೆಲಿಕಮ್ಯೂನಿಕೇಶನ್ ಅಥೊರಿಟಿ (ಪಿಟಿಎ) ಪಬ್ಜಿಯನ್ನು ನಿಷೇಧಿಸಿ ಆದೇಶ ಹೊರಿಡಿಸಿದೆ. ಪಬ್ ಜಿ ಅನೇಕರು ಅಡಿಕ್ಟ್ ಆಗುತ್ತಿದ್ದಾರೆ. ಈ ಆಟದ ಚಟ ಅಂಟಿಸಿಕೊಳ್ಳುವವರ ಆರೋಗ್ಯ ಹಾಳಾಗುತ್ತಿದೆ ಎಂಬಂಥ ದೂರುಗಳು ಸಮಾಜದ ವಿವಿಧ ವರ್ಗಗಳಿಂದ ಬರುತ್ತಿವೆ. ಹಾಗಾಗಿ ಪಬ್ಜಿಯನ್ನು ತಾತ್ಕಾಲಿಕವಾಗಿ ನಿಷೇಧಿಸುತ್ತಿದ್ದೇವೆ ಎಂದು ಪಿಟಿಎ ತಿಳಿಸಿದೆ. ಇದನ್ನೂ ಓದಿ: ನಾಯಿ ಮರಿಯನ್ನು ಹೊತ್ತೊಯ್ಯುತ್ತಿದ್ದ ಚಿರತೆ ಮೇಲೆ ಬೀದಿ ನಾಯಿಗಳ ದಾಳಿ; ಮರಿ ಬಿಟ್ಟು ಓಡಿದ ಚಿರತೆ
ಮಕ್ಕಳು, ಯುವಜನತೆ ಪಬ್ ಜಿಗೆ ತುಂಬ ಅಂಟಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಮಯ ಹಾಳು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅವರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಈ ಎಲ್ಲ ಕೆಟ್ಟ ಅಂಶಗಳನ್ನು ಪಿಟಿಎ ಪರಿಗಣಿಸಿ ನಿಷೇಧದ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಪಾಕಿಸ್ತಾನದಲ್ಲಿ ಪಬ್ಜಿಯಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಪಬ್ಜಿ ಚಟಕ್ಕಂಟಿದ ಅನೇಕ ಮಕ್ಕಳು, ಯುವಜನತೆ ಸೂಸೈಡ್ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ 16 ವರ್ಷದ ಬಾಲಕನೋರ್ವ ಕೂಡ ಪಬ್ಜಿಗೆ ಅಡಿಕ್ಟ್ ಆಗಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಲವು ಪ್ರಕರಣಗಳ ವಿಚಾರಣೆ ಲಾಹೋರ್ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಹಾಗಾಗಿ ಪಬ್ ಜಿ ನಿಷೇಧದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕ್ ತಿಳಿಸಿದೆ. (ಏಜೆನ್ಸೀಸ್)