ದಿಶಾ ರವಿ ಬಂಧನದಿಂದಾಗಿ ಕೆರಳಿದ ಪಾಕ್​! ಬಾಯಿ ಮುಚ್ಚಿಸುವ ಕೆಲಸ ನಿಮ್ಮದು ಎಂದ ಇಮ್ರಾನ್​ ಖಾನ್​

disha jail
Published on

ನವದೆಹಲಿ: ಗ್ರೆಟಾ ಥಬ್​ಬರ್ಗ್​ ಟೂಲ್​ಕಿಟ್​ ಪ್ರಕರಣ ಸಂಬಂಧಿಸಿ ಬೆಂಗಳೂರಿನ ಪರಿಸರ ವಾದಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಟೂಲ್​ಕಿಟ್​ ಕೆಲ ಸಾಲುಗಳನ್ನು ಎಡಿಟ್​ ಮಾಡಿಕೊಟ್ಟಿದ್ದಾಗಿ ಸ್ವತಃ ದಿಶಾ ಒಪ್ಪಿಕೊಂಡಿದ್ದಾಳೆ. ಆದರೆ ಅದಾಗಲೇ ದೇಶ ವಿದೇಶಗಳಲ್ಲಿ ದಿಶಾ ಪರ ವಿರೋಧದ ಹೋರಾಟಗಳು ಆರಂಭವಾಗಿಬಿಟ್ಟಿವೆ. ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಕೂಡ ಈ ವಿಚಾರದಲ್ಲಿ ಬಾಯಿ ತೆರೆದಿದ್ದಾರೆ.

ಮೋದಿ ಮತ್ತು ಆರ್​ಎಸ್​ಎಸ್​ಗೆ ಅವರ ವಿರುದ್ಧ ಮಾತನಾಡುವವರನ್ನು ಬಾಯಿ ಮುಚ್ಚಿಸುವದೇ ಕೆಲಸ. ಇದೀಗ ಟ್ವಿಟ್ಟರ್​ ಟೂಲ್​ಕಿಟ್​ ಪ್ರಕರಣದಲ್ಲಿ ದಿಶಾ ರವಿಯನ್ನು ಅದೇ ರೀತಿ ಬಾಯಿ ಮುಚ್ಚಿಸುವ ಸಲುವಾಗಿ ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಆಡಳಿತ ಪಕ್ಷ ಟ್ವಿಟ್ಟರ್​ನಲ್ಲಿ ದೂರಿದೆ.

ರೈತರನ್ನು ಕೆರಳಿಸುವ ಉದ್ದೇಶದಿಂದ ಟೂಲ್​ಕಿಟ್​ ಬಿಡುಗಡೆ ಮಾಡಲಾಗಿತ್ತು. ಟೂಲ್​ಕಿಟ್​ ಸೃಷ್ಠಿಕರ್ತರ ಹಿಂದೆ ಬಿದ್ದ ದೆಹಲಿ ಪೊಲೀಸರು ಬೆಂಗಳೂರಿನ 21 ವರ್ಷದ ಯುವತಿ ದಿಶಾಳನ್ನು ಶನಿವಾರದಂದು ಬಂಧಿಸಿ ದೆಹಲಿಗೆ ಕರೆದೊಯ್ದಿದ್ದಾರೆ. ಅದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಕೀಲೆ ನಿಕಿತಾ ಹಾಗೂ ಇನ್ನೊಬ್ಬ ಕಾರ್ಯಕರ್ತನಿಗೂ ಜಾಮೀನು ರಹಿತ ವಾರಂಟ್​ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net