ಪಾಕಿಸ್ತಾನ್ ಎಂದು ಕೂಗಿದವ ರಾಹುಲ್ ಗಾಂಧಿ ಆಪ್ತ: ಅಶೋಕ್

R Ashok
Published on

ಬೆಂಗಳೂರು:
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಮೊಹಮ್ಮದ್ ಇಲ್ತಾಝ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಪ್ತನಾಗಿದ್ದಾನೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಈ ಇಡೀ ಪ್ರಕರಣ ಐಘೆಇಐ್ಞಜಿ ಪಕ್ಷದ ದೇಶ ಪ್ರೇಮಕ್ಕೆ, ರಾಷ್ಟ್ರ ನಿಷ್ಠೆಗೆ ಒಂದು ಅಗ್ನಿ ಪರೀಕ್ಷೆಯಾಗಿದ್ದು, ಕಾಂಗ್ರೆಸ್ ಸರ್ಕಾರದ ನಡೆಯನ್ನ ಬರೀ ಕರ್ನಾಟಕ ಅಲ್ಲ, ಇಡೀ ದೇಶದ ಜನತೆ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದಿದ್ದಾರೆ.
ಮೊಹಮ್ಮದ್ ಇಲ್ತಾಝ್ ರಾಹುಲ್ ಗಾಂಧಿ ಆಪ್ತನಷ್ಟೆ ಅಲ್ಲ, ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಾಗ ಕೂಡ ಅವರ ಜೊತೆ ಪಾಲ್ಗೊಂಡಿದ್ದ. ಈ ಗಂಭೀರ ಪ್ರಕರಣದ ತನಿಖೆ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಈ ದೋಸ್ತಿಯೇ ಕಾರಣಾನಾ? ಸಿಎಂ ಮತ್ತು ಡಿಸಿಎಂ ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net