ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದ Pakistan Presidet : ಕಾಲು ಮುರಿದು ಆಸ್ಪತ್ರೆಗೆ ದಾಖಲು..​

asif ali zardari
Published on

ದುಬೈ: ಪಾಕಿಸ್ತಾನದ ಅಧ್ಯಕ್ಷ ( Pakistan Presidet ) ಆಸಿಫ್ ಅಲಿ ಜರ್ದಾರಿ ( asif ali zardari ) ಬುಧವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ವಿಮಾನ  ನಿಲ್ದಾಣಕ್ಕೆ ಆಗಮಿಸಿದರು, ಅಲ್ಲಿ ಅವರು ವಿಮಾನದಿಂದ ಇಳಿಯುವಾಗ ಕುಸಿದುಬಿದ್ದರು. ಇದರಿಂದ ಅವರ ಕಾಲು ಮುರಿದಿದೆ.

ರಾಷ್ಟ್ರಪತಿ ಭವನದಿಂದ ಬಂದ ಮಾಹಿತಿಯ ಪ್ರಕಾರ, ಬಿದ್ದ ನಂತರ,  ವಿಮಾನ ಇಳಿಯುವ ವೇಳೆ ಆಸಿಫ್​​ ಅಲಿ ಜರ್ದಾರಿ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.ವೈದ್ಯರು ನಾಲ್ಕು ವಾರಗಳ ಕಾಲವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು  ಹೇಳಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆಯಂತೆ. ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. 69 ವರ್ಷ ವಯಸ್ಸಿನ ಅಧ್ಯಕ್ಷ ಆಸಿಫ್ ಅಲಿ ಕಳೆದ ಕೆಲವು ವರ್ಷಗಳಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

69 ವರ್ಷದ ಅಧ್ಯಕ್ಷ ಇತ್ತೀಚೆಗೆ ಅನೇಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮಾರ್ಚ್​ 2023 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡಿದ್ದರು. 2022 ರಲ್ಲಿ ಒಂದು ವಾರ ಡಾ. ಜಿಯಾವುದ್ದೀನ್ ಆಸ್ಪತ್ರೆಯಲ್ಲಿ ಎದೆಯ ನೋವಿಗೆ ಚಿಕಿತ್ಸೆ ತೆಗೆದುಕೊಂಡಿದ್ದರು.

2022 ರಲ್ಲಿ ಜರ್ದಾರಿ ಅವರಿಗೆ ಕೆಲ ಕೋವಿಡ್-19 ಲಕ್ಷಣಗಳು ಕಂಡುಬಂದಿದ್ದು, ಬಹಳ ಪ್ರವಾಸ ಮಾಡುತ್ತಿದ್ದ ಕಾರಣ ಅವರಿಗೆ ಒಂದು ವರ್ಷದ ಹಿಂದೆ ಅನಾರೋಗ್ಯದ ಸಮಸ್ಯೆ ಉಂಟಾಗಿತ್ತು ಎಂದು ಅವರ ಪುತ್ರ ಮತ್ತು PPP ಅಧ್ಯಕ್ಷ ಬಿಲಾವಲ್ ಭುಟ್ಟೋ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net