ನಾ ಮುಂದು ತಾ ಮುಂದು ಎಂದು ಕೇಕ್​ ಮೇಲೆ ಬಿದ್ದ ಪಾಕಿಸ್ತಾನಿಯರು! ಸಚಿವರನ್ನು ಕಿತ್ತು ತಿನ್ನದಿರುವುದೇ ಪುಣ್ಯ!

pak
Published on

ಇಸ್ಲಾಮಾಬಾದ್​: ಭಾರತದಲ್ಲಿ ಏನೇ ಸಣ್ಣ ಸಮಸ್ಯೆಯಾದರೂ ಅದನ್ನು ಒಂದು ಸಂಭ್ರಮದಂತೆ ನೋಡುವ ಪಾಪಿ ಪಾಕಿಸ್ತಾನದಲ್ಲಿ ಇದೀಗ ಒಂದು ವಿಡಿಯೋ ಸಖತ್​ ವೈರಲ್​ ಆಗಿದೆ. ಸಚಿವರೊಬ್ಬರು ರಸ್ತೆಯೊಂದರ ಉದ್ಘಾಟನೆ ನಡೆಸಿ, ಕಟ್​ ಮಾಡಿದ್ದ ಕೇಕ್​ಗಾಗಿ ಜನರು ಮುಗಿಬಿದ್ದ ಪರಿಯನ್ನು ಕಂಡು ಜನರು ನೆಟ್ಟಿಗರು ನಗಲಾರಂಭಿಸಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಇತ್ತೀಚೆಗೆ ಒಂದು ರಸ್ತೆಯನ್ನು ಉದ್ಘಾಟನೆ ಮಾಡಿದ್ದಾರೆ. ಕಾರ್ಯಕ್ರಮವ ಭಾಗವಾಗಿ ದೊಡ್ಡದೊಂದು ಕೇಕ್​ನ್ನು ಕತ್ತರಿಸಲಾಗಿದೆ. ಸಚಿವರ ಜತೆ ಎರಡು ಮೂರು ಜನರು ಚಾಕು ಹಿಡಿದು ಕೇಕ್​ ಕತ್ತರಿಸಿದ್ದಾರೆ. ಕೇಕ್​ ಕತ್ತರಿಸಿದ ಸಚಿವರು ಒಂದು ತುಂಡು ಕೇಕ್​ನ್ನು ತಿನ್ನಲು ಮುಂದಾದರು. ಮುಖದಲ್ಲಿ ಮಾಸ್ಕ್​ ತೊಟ್ಟಿರುವುದನ್ನು ಮರೆತು, ಅವಸರದಲ್ಲಿ ಕೇಕ್​ ತಿನ್ನಲು ಮುಂದಾಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಅವರು ಇನ್ನೇನು ಕೇಕ್​ ಕಟ್​ ಮಾಡಿ, ಆಕಡೆ ತಿರುಗಿದ್ದಾರೆ ಎನ್ನುವಷ್ಟರಲ್ಲಿ ಅಲ್ಲಿದ್ದ ಜನರು ಕೇಕ್​ಗೆ ಕೈ ಹಾಕಿದ್ದಾರೆ. ಎಷ್ಟರ ಮಟ್ಟಿಗೆ ಕೇಕ್​ಗೆ ಕೈ ಹಾಕಿ ತೆಗೆದುಕೊಂಡಿದ್ದಾರೆಂದರೆ, ಕೇಕ್​ ಕೆಳಗೇ ಬಿದ್ದು ಹೋಗಿದೆ. ಆದರೂ ಬಿಡದೆ ಕೆಳಗೆ ಇದ್ದ ಕೇಕ್​ನ್ನೂ ಎತ್ತಿಕೊಂಡು ತಿಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net