

ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ನೊಬೆಲ್ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಪಾಕಿಸ್ತಾನ ಕಳುಹಿಸಿದೆ. ಈ ವಿಚಾರಕ್ಕೆ ಮಾತನಾಡಿರುವ ಟ್ರಂಪ್, ''ನಾನು ಏನೇ ಮಾಡಿದರೂ ನನಗೆ ನೊಬೆಲ್ ಸಿಗುವುದಿಲ್ಲ, ಏಕೆಂದರೆ ಅದು ಉದಾರವಾದಿಗಳಿಗೆ ಮಾತ್ರ ನೀಡಲಾಗುತ್ತದೆ'' ಎಂದು ತಮ್ಮ ನೋವುನ್ನು ಹೇಳಿಕೊಂಡಿದ್ದಾರೆ.
ಪಾಕ್ ಹೇಳಿದ್ದೇನು..?
ಇತ್ತೀಚಿನ ಭಾರತ-ಪಾಕ್ ಉದ್ವಿಗ್ನತೆಯ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ 'ನಿರ್ಣಾಯಕ ರಾಜತಾಂತ್ರಿಕ ಹಸ್ತಕ್ಷೇಪ' ಮಾಡಿದ ಕಾರಣ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಕಳುಹಿಸಿರುವುದಾಗಿ ಪಾಕಿಸ್ತಾನ ಸರ್ಕಾರ ತನ್ನ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಘೋಷಿಸಿದೆ.
ಟ್ರಂಪ್ ಹೇಳಿದ್ದೇನು..?
'ಕಾಂಗೋ-ರುವಾಂಡಾ, ಭಾರತ-ಪಾಕಿಸ್ತಾನ, ಸೆರ್ಬಿಯಾ-ಕೊಸೊವೊ, ಈಜಿಪ್ಟ್-ಇಥಿಯೋಪಿಯಾ, ಮಧ್ಯಪ್ರಾಚ್ಯದ ಅಬ್ರಹಾಂ ಒಪ್ಪಂದ... ನಾನು ಏನೇ ಮಾಡಿದರೂ ನನಗೆ ನೊಬೆಲ್ ಸಿಗುವುದಿಲ್ಲ' ಎಂದು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ನಲ್ಲಿ ಬರೆದಿದ್ದಾರೆ.
ನೊಬೆಲ್ ಹಿನ್ನೆಲೆ
ನೊಬೆಲ್ ಶಾಂತಿ ಪ್ರಶಸ್ತಿಯು ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ವಿಶ್ವ ಶಾಂತಿಗೆ ಅಸಾಧಾರಣ ಕೊಡುಗೆ ನೀಡುವ ಜನರು ಅಥವಾ ಸಂಸ್ಥೆಗಳಿಗೆ ಇದನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಸ್ವೀಡಿಷ್ ವಿಜ್ಞಾನಿ ಮತ್ತು ಡೈನಮೈಟ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಪ್ರಾರಂಭಿಸಿದರು.(ಏಜೆನ್ಸೀಸ್)