ಇಂಗ್ಲಿಷ್​ ಬರದ ಪಾಕ್​ ವಿವಿ: ನೋಟಿಸ್​ನಲ್ಲೇ ತಪ್ಪು ಹುಡುಕಿದ ನೆಟ್ಟಿಗರು! ಹಾಡು ಕೇಳಿದ್ದಕ್ಕೆ ಫೈನ್​!

pak
Published on

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಅದೆಷ್ಟರ ಮಟ್ಟಿಗೆ ಜಾಣರಿದ್ದಾರೆ ಎನ್ನುವುದಕ್ಕೆ ಆಗಾಗ ನಿದರ್ಶನಗಳು ಸಿಕ್ಕುತ್ತಿರುತ್ತವೆ. ಇದೀಗ ಪಾಕ್​ನ ವಿಶ್ವವಿದ್ಯಾಲಯವೊಂದರ ನೋಟಿಸ್​ ಕೂಡ ಅದರ ಜಾಣತನಕ್ಕೆ ನಿರ್ದೇಶನವಾಗಿ ಹೊರಹೊಮ್ಮಿದೆ. ಕ್ಲಾಸಿನಲ್ಲಿ ಕುಳಿತು ಹಾಡು ಕೇಳುತ್ತಿದ್ದ ವಿದ್ಯಾರ್ಥಿಗಳಿಗೆ ವಿವಿ ದಂಡ ವಿಧಿಸಿದ್ದು, ಆ ನೋಟಿಸ್​ ಸಕತ್​ ವೈರಲ್​ ಆಗಿದೆ.

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್‌ನಲ್ಲಿರುವ ಗೋಮಲ್ ವಿಶ್ವವಿದ್ಯಾಲಯ ಸುದ್ದಿಯಲ್ಲಿರುವ ವಿವಿ. ಈ ವಿವಿಯ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟಿಂಗ್ ಮತ್ತು ಮಾಹಿತಿ ತಂತ್ರಜ್ಞಾನ (ಐಸಿಐಟಿ) ವಿಭಾಗದ ಇಬ್ಬರು ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದೆ. ಆ ಇಬ್ಬರು ವಿದ್ಯಾರ್ಥಿಗಳು ತರಗತಿ ನಡೆಯುತ್ತಿದ್ದಾಗ ಬ್ಲೂಟೂತ್​ ಇಯರ್​ಫೋನ್​ ಹಾಕಿಕೊಂಡು ಹಾಡು ಕೇಳುತ್ತಿದ್ದರಂತೆ. ಪ್ರಾಧ್ಯಾಪಕರು ಅದೆಷ್ಟೇ ಎಚ್ಚರಿಕೆ ಕೊಟ್ಟರೂ ಅವರು ತಲೆ ಕೆಡಿಸಿಕೊಂಡಿರಲಿಲ್ಲವಂತೆ. ಅದೇ ಕಾರಣಕ್ಕೆ ಅವರಿಗೆ ತಲಾ 5 ಸಾವಿರ ರೂಪಾಯಿ ದಂಡ ಹಾಕಲಾಗಿದೆ. ಅವರ ಬಳಿ ಇದ್ದ ಇಯರ್​ಫೋನ್​ನ್ನು ವಶಕ್ಕೆ ಪಡೆಯಲಾಗಿದೆ.

ವಿದ್ಯಾರ್ಥಿಗಳಿಗೆ ದಂಡ ವಿಧಿಸಿರುವ ಬಗ್ಗೆ ವಿವಿ ನೋಟಿಸ್​ ಬಿಟ್ಟಿದೆ. ಆದರೆ ಆ ನೋಟಿಸ್​ನಲ್ಲಿ ತಪ್ಪಿರುವುದನ್ನು ನೆಟ್ಟಿಗರು ಕಂಡುಹಿಡಿದಿದ್ದಾರೆ. ಈ ನೋಟಿಸ್​ ಪ್ರತಿ ಇದೀಗ ಸಕತ್​ ವೈರಲ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net