ಬಿಗ್​ ಬಾಸ್​ ಮನೆಯಲ್ಲಿ ಎರಡೆರೆಡು ಲವ್​ ಸ್ಟೋರಿ! ಶುಭಾ ಮದುವೆ ನಂತರ ಇವರ ಮದುವೆ ಫಿಕ್ಸ್​ ಅಂತೆ!

biggboss
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8 ಕನ್ನಡ ನಾಡಿನಲ್ಲಿ ಮತ್ತೊಂದು ಸಂಚಲನ ಆರಂಭಿಸಿದೆ. ಮನೆಯಲ್ಲಿ ಅತ್ಯಂತ ಆ್ಯಕ್ಟಿವ್​ ಇರುವ ಮಂಜು ಮತ್ತು ದಿವ್ಯಾ ಸುರೇಶ್​ರ ಪ್ರೇಮ, ಮದುವೆ ಕಥೆ ನಿಮಗೆಲ್ಲ ಗೊತ್ತೇ ಇದೆ. ಇದೀಗ ಮನೆಯಲ್ಲಿ ಮತ್ತೊಂದು ಲವ್​ ಸ್ಟೋರಿ ಆರಂಭವಾಗಿದ್ದು, ಮದುವೆಯವರೆಗೂ ಮಾತುಕತೆ ನಡೆದುಬಿಟ್ಟಿದೆ.

ಹೌದು! ನಾವೀಗ ಹೇಳಲೊರಟಿರುವುದು ದಿವ್ಯಾ ಉರುಡುಗ ಮತ್ತು ಅರವಿಂದ್​ ಬಗ್ಗೆಯೇ. ಜೋಡಿ ಟಾಸ್ಕ್​ ವಾರದಲ್ಲಿ ದಿವ್ಯಾ ಉರುಡುಗ ಮೂರು ಮಂದಿಯನ್ನು ರಿಜೆಕ್ಟ್​ ಮಾಡಿ ಅರವಿಂದ್​ಗೆ ಓಕೆ ಎಂದಿದ್ದಾರೆ. ಪೂರ್ತಿ ವಾರ ಇಬ್ಬರು ಅತ್ಯಂತ ಅನ್ಯೋನ್ಯವಾಗಿ ಕಳೆದಿದ್ದಾರೆ. ಇವರಿಬ್ಬರ ನಡವಳಿಕೆ ಗಮನಿಸುತ್ತಿರುವ ಮನೆ ಮಂದಿ, ಇವರಿಬ್ಬರ ನಡುವೆ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

ಗೀತಾ ಮತ್ತು ಪ್ರಶಾಂತ್​ ಸಂಬರಗಿ ಕೂಡ ಈ ಜೋಡಿಯ ಬಗ್ಗೆ ಮಾತನಾಡಿಕೊಂಡಿದ್ದಾರಂತೆ. ಲವ್​ ಏನಾದರೂ ಇದೆಯಾ ಎಂದು ಕೇಳಿದ್ದಕ್ಕೆ, ಇಲ್ಲ ಜೋಡಿ ಟಾಸ್ಕ್​ ಆಗಿದ್ದಕ್ಕೆ ಮಾತ್ರವೇ ಜತೆಗಿದ್ದೇವೆ ಎಂದು ದಿವ್ಯಾ ಗೀತಾಳ ಬಳಿ ಹೇಳಿದ್ದಾರಂತೆ. ಆದರೆ ಅರವಿಂದ್​ ಮಾತ್ರ ದಿವ್ಯಾಳನ್ನು ಲವ್​ ಮಾಡುವ ಯೋಚನೆ ಮಾಡಿದ್ದಾರಂತೆ. ಈ ವಿಚಾರವನ್ನು ಸ್ವತಃ ಅವರೇ ಪ್ರಶಾಂತ್​ ಬಳಿ ಹಂಚಿಕೊಂಡಿದ್ದಾರಂತೆ. ಈ ಮಾತು ಕೇಳಿದ ಗೀತಾ ಅದಾಗಲೇ ಮದುವೆ ಊಟದ ಬಗ್ಗೆ ಯೋಚನೆ ಆರಂಭಿಸಿಬಿಟ್ಟಿದ್ದಾರೆ. ಮನೆಯಿಂದ ಹೊರಗೆ ಹೋದ ಮೇಲೆ ಮೊದಲು ಶುಭಾ ಪೂಂಜಾ ಮದುವೆಯಾಗುತ್ತೆ, ಅದಾದ ನಂತರ ಈ ಜೋಡಿ ಮದುವೆ ಊಟ ನಮಗೆ ಸಿಗಬಹುದು ಎಂದು ಅವರು ಪ್ರಶಾಂತ್​ ಬಳಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net