

ಗುವಾಹಟಿ: ರೈತ ಹೋರಾಟದ ಟೂಲ್ಕಿಟ್ ಪ್ರಕರಣದಲ್ಲಿ ಬಂಧಿತಳಾದ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿದ್ದಾರೆ. ಅಸ್ಸಾಂನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಅವರು ದಿಶಾ ಬಗ್ಗೆ ಮಾತನಾಡಿದ್ದಾರೆ.
ನಮ್ಮ ದೇಶದ ಪ್ರಧಾನಿಗೆ 22 ವರ್ಷದ ದಿಶಾ ರವಿಯ ಟ್ವೀಟ್ ಬಗ್ಗೆ ಬೇಸರ ವ್ಯಕ್ತಪಡಿಸಲು ಆಗುತ್ತದೆ ಆದರೆ ಅವರಿಗೆ ಅಸ್ಸಾಂನಲ್ಲಾದ ಪ್ರವಾಹವಾಗಲೀ ಅಥವಾ ಸಿಎಎ ವಿಚಾರವಾಗಲಿ ಮಾತನಾಡಲು ಆಗುವುದಿಲ್ಲ ಎಂದು ಅವರು ದೂರಿದ್ದಾರೆ.
ಅಸ್ಸಾಂನಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ರಾಜ್ಯದಲ್ಲಿ ಚುನಾವಣೆ ಪ್ರಚಾರವನ್ನು ನಡೆಸುತ್ತಿದ್ದಾರೆ. ಜೋರ್ಹತ್ನಲ್ಲಿ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ ಅವರು ಬಿಜೆಪಿಯನ್ನು ದೂರಿದ್ದಾರೆ. ಬಿಜೆಪಿ ಸರ್ಕಾರವು ನಮ್ಮ ದೇಶದ ಯುವ ಜನತೆಗೆ, ಕಾರ್ಮಿಕರಿಗೆ ಮತ್ತು ರೈತರಿಗೆ ಮೋಸ ಮಾಡುತ್ತಿದೆ. ಪ್ರಧಾನಿಯವರು ಯಾವತ್ತಾದರೂ ಅಸ್ಸಾಂನ ಟೀ ಎಸ್ಟೇಟ್ಗೆ ಭೇಟಿ ನೀಡಿದ್ದಾರಾ? ಇಲ್ಲಿ ಕೆಲಸ ಮಾಡುವ ಮಹಿಳೆಯರ ಕಷ್ಟವನ್ನು ಆಲಿಸಿದ್ದಾರಾ? ಟೀ ಎಸ್ಟೇಟ್ ಕೆಲಸಗಾರರಿಗೆ ದಿನಕ್ಕೆ 350 ರೂಪಾಯಿ ಕೂಲಿ ಕೊಡಿಸುವುದಾಗಿ ಹೇಳಿ ಅದನ್ನು ಮರೆತಿದ್ದಾರಲ್ಲಾ? ಅದರ ಬಗ್ಗೆ ಅವರಿಗೆ ಏನಾದರೂ ನೋವಿದೆಯೇ ಎಂದು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. (ಏಜೆನ್ಸೀಸ್)