ಭಾರತದ ದಿಗ್ಗಜ ಬಾಕ್ಸರ್, 6 ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರ ಕಠಿಣ ಹಾದಿ ಭಾರತೀಯರಿಗಷ್ಟೇ ಅಲ್ಲ, ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನದ ಹೆಣ್ಣುಮಗಳಿಗೂ ಸ್ಫೂರ್ತಿಯಾಗಿದೆ ಎಂಬ ಸಂಗತಿ ಭಾರತೀಯರ ಹುಬ್ಬೇರಿಸಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಕ್ನ 22 ವರ್ಷದ ಫಾತಿಮಾ ಝಹ್ರಾ, ಮಹಿಳೆಯರ 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್ನ ಇತಿಹಾಸದಲ್ಲೇ ಪದಕ ಗೆದ್ದ ಮೊದಲ ಪಾಕಿಸ್ತಾನಿ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.