

Vikram Mistry: ಪಾಕಿಸ್ತಾನವು ನಿರ್ದಿಷ್ಟ ಉದ್ದೇಶದಿಂದಲೇ ಪೂಜಾ ಸ್ಥಳಗಳನ್ನು(ಧಾರ್ಮಿಕ ಸ್ಥಳ) ಗುರಿಯಾಗಿಸಿಕೊಂಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಶುಕ್ರವಾರ ಹೇಳಿದ್ದಾರೆ.
ಈ ಕುರಿತು ದೆಹಲಿಯ ವಿದೇಶಾಂಗ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಾಕಿಸ್ತಾನದಿಂದ ಹಾರಿಸಲಾದ ಶೆಲ್ ದಾಳಿಗೆ ಕ್ರೈಸ್ಟ್ ಶಾಲೆಯ ಇಬ್ಬರು ವಿದ್ಯಾರ್ಥಿಗಳ ಮನೆಗೆ ಬಡಿದಿದ್ದು, ದುರದೃಷ್ಟವಶಾತ್ ಇಬ್ಬರೂ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡರು ಮತ್ತು ಅವರ ಪೋಷಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರ್ಮೆಲ್ ಮಾತೆಯ ಸಭೆಗೆ ಸೇರಿದ ಕ್ರೈಸ್ತ ಸನ್ಯಾಸಿನಿಯರ ಕಾನ್ವೆಂಟ್ ಮೇಲೆ ಮತ್ತೊಂದು ಶೆಲ್ ದಾಳಿ ನಡೆದಿದ್ದು, ನೀರಿನ ಟ್ಯಾಂಕ್‌ಗಳಿಗೆ ಹಾನಿಯಾಗಿದೆ ಮತ್ತು ಸೌರ ಫಲಕ ಮೂಲಸೌಕರ್ಯವನ್ನು ನಾಶಪಡಿಸಿದೆ ಎಂದು ವಿಕ್ರಮ್ ಮಿಸ್ರಿ ಹೇಳಿದರು.
"ಪಾಕಿಸ್ತಾನದ ಶೆಲ್ ದಾಳಿಯ ಸಮಯದಲ್ಲಿ ಹಲವಾರು ಪಾದ್ರಿಗಳು, ಸನ್ಯಾಸಿಗಳು, ಶಾಲಾ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಕ್ರೈಸ್ಟ್ ಶಾಲೆಯ ಕೆಳಗಿರುವ ಭೂಗತ ಸಭಾಂಗಣದಲ್ಲಿ ಆಶ್ರಯ ಪಡೆದರು. ಅದೃಷ್ಟವಶಾತ್, ಆ ಸಮಯದಲ್ಲಿ ಶಾಲೆಯನ್ನು ಮುಚ್ಚಲಾಗಿತ್ತು; ಇಲ್ಲದಿದ್ದರೆ, ಹೆಚ್ಚಿನ ನಷ್ಟಗಳು ಸಂಭವಿಸುತ್ತಿದ್ದವು," ಎಂದು ವಿಕ್ರಮ್ ಮಿಸ್ರಿ ಹೇಳಿದರು.
"ಗುರುದ್ವಾರಗಳು, ಕಾನ್ವೆಂಟ್‌ಗಳು ಮತ್ತು ದೇವಾಲಯಗಳು ಸೇರಿದಂತೆ ನಿರ್ದಿಷ್ಟ ವಿನ್ಯಾಸದ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಕಡೆಯವರು ಶೆಲ್ ದಾಳಿ ನಡೆಸುವುದನ್ನು ನಾವು ನೋಡಿದ್ದೇವೆ ಎಂದಿದ್ದಾರೆ.''(ಏಜೆನ್ಸೀಸ್)