ದುಬೈನಲ್ಲಿ PSL ಆಡಿಸಲು ಮುಂದಾದ ಪಾಕ್​​​ಗೆ ಶಾಕ್!: ಆತಿಥ್ಯ ವಹಿಸಲು ಹಿಂದೇಟು ಹಾಕಿದ UAE

dk - 2025-05-09T195414.113
Published on

PSL: ಕಳೆದ ಎರಡು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಯಲ್ಲಿ ಭಾರೀ ಉದ್ವಿಗ್ನತೆ ಏರ್ಪಪಟ್ಟಿದ್ದು, ಪಾಕ್​ ನಡೆಸಿದ ಕದನ ವಿರಾಮ ಉಲ್ಲಂಘನೆ ವಿರುದ್ಧ ನಮ್ಮ ಸೇನಾಪಡೆಗಳು ದಿಟ್ಟ ಉತ್ತರ ಕೊಡುತ್ತಿವೆ. ಇದೀಗ ಈ ಸಂಘರ್ಷದಿಂದ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್​ ಲೀಗ್​(PSL) ಅನ್ನು ದುಬೈನಲ್ಲಿ ಆಡಿಸುವುದಾಗಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಇಂದು ಬೆಳಗ್ಗೆ(ಮೇ.09) ಹೇಳಿತ್ತು. ಆದರೆ, ಅತಿಥ್ಯವಹಿಸಲು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಿರಾಕರಿಸಿದೆ ಎಂದು ವರದಿಯಾಗಿದೆ. ಈ ಮೂಲಕ ಆಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.(ಆಪ್ಡೇಟ್​ ಆಗುತ್ತಿದೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net