

ಇಸ್ಲಾಮಾಬಾದ್: ಅಫ್ಘಾನಿಸ್ತಾನವು ತನ್ನ ನೆಲದಿಂದ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದಕರ ವಿರುದ್ಧ ದೃಢವಾದ ನಿಲುವನ್ನು ತೆಗೆದುಕೊಳ್ಳುವಂತೆ ಪಾಕ್ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ (Asim Munir) ಶನಿವಾರ (ಅಕ್ಟೋಬರ್,18) ಎಚ್ಚರಿಸಿದ್ದಾರೆ.
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಅಬೋಟಾಬಾದ್ನಲ್ಲಿರುವ ಪಾಕ್ ಮಿಲಿಟರಿ ಅಕಾಡೆಮಿ (ಪಿಎಂಎ) ಕಾಕುಲ್ನಲ್ಲಿ ಸೇನಾ ಕೆಡೆಟ್ಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುನೀರ್, ಶಾಂತಿ ಮತ್ತು ಅವ್ಯವಸ್ಥೆ ನಡುವೆ ಆಯ್ಕೆ ಮಾಡಿಕೊಳ್ಳಿ ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಅಫ್ಘಾನಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರನ್ನು ತಾಲಿಬಾನ್ ಆಡಳಿತವು ಕಟುವಾದ ಕ್ರಮಕೈಗೊಳ್ಳಬೇಕು. ಇಲ್ಲದೆ ಹೋದರೆ ಅಫ್ಘಾನ್ ನೆಲವನ್ನು ಬಳಸುವ ಎಲ್ಲಾ ಪ್ರಾಕ್ಸಿಗಳನ್ನು ಧೂಳಿಗೆ ಎಸೆದು ಪ್ರತಿದಾಳಿ ಮಾಡಲಾಗುವುದು ಎಂದು ಮುನೀರ್ ತಾಲಿಬಾನ್ಗೆ ಎಚ್ಚರಿಸಿದ್ದಾರೆ.
ಕಳೆದ ವಾರದಲ್ಲಿ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಮೇಲೆ ದಾಳಿ ನಡೆಸಿದ್ದ ಪಾಕ್ಗೆ ಪ್ರತಿಕ್ರಿಯೆಯಾಗಿ ತಾಲಿಬಾನ್ ಪಡೆಗಳು ಪಾಕ್ ವಿರುದ್ಧ ಪ್ರತೀಕಾರದ ದಾಳಿಗಳನ್ನು ನಡೆಸಿದ ನಂತರ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಭುಗಿಲೆದ್ದಿದೆ.
ಎರೆಡು ದೇಶಗಳ ನಡುವಿನ ಸಂಘರ್ಷವು ಕತಾರ್ ಮತ್ತು ಸೌದಿ ಅರೇಬಿಯಾದ ಹಸ್ತಕ್ಷೇಪದ ನಂತರ ಸ್ಥಗಿತಗೊಂಡಿತ್ತು. ಅದರೆ ಗಡಿಯಲ್ಲಿನ ಹೋರಾಟ ಮಂಗಳವಾರ ಪುನರ್ ಆರಂಭವಾಯಿತು. ಕತಾರ್ನ ದೋಹಾದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿರುವ ಮಾತುಕತೆಗಳ ಮುಕ್ತಾಯದವರೆಗೆ ಇದನ್ನು ವಿಸ್ತರಿಸಿದ್ದಾರೆ. ಅದರೆ, ಶುಕ್ರವಾರ ಪಾಕಿಸ್ತಾನ ನಡಡೆಸಿದ ದಾಳಿಯು ಅಫ್ಘಾನಿಸ್ತಾನದ ಮೂವರು ಸ್ಥಳೀಯ ಕ್ರಿಕೆಟಿಗರು ಸೇರಿದಂತೆ 10 ನಾಗರಿಕರನ್ನು ಕೊಂದ ನಂತರ ಯುದ್ಧವು ಮತ್ತೆ ಪ್ರಾರಂಭವಾಗಿದೆ.
ಭಯೋತ್ಪಾದಕ ಗುಂಪುಗಳು ಗಡಿಯಾಚೆಗಿನ ದಾಳಿಗಳಿಗೆ ಅಫ್ಘಾನ್ ಪ್ರದೇಶವನ್ನು ಬಳಸುವುದನ್ನು ತಡೆಯುವಂತೆ ಪಾಕ್ ತಾಲಿಬಾನ್ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸುತ್ತಿದೆ. ಅದರೆ, ಕಾಬೂಲ್ ಈ ಆರೋಪಗಳನ್ನು ನಿರಾಕರಿಸುತ್ತಿದೆ.
ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಫ್ಘಾನ್ ಮಣ್ಣನ್ನು ಬಳಸುತ್ತಿದೆ ಎನ್ನಲಾದ ಭಯೋತ್ಪಾದಕ ದಾಳಿಗಳ ನಂತರ ಎರಡೂ ದೇಶಗಳ ನಡುವಿನ ಪರಿಸ್ಥಿತಿ ಹದಗೆಟ್ಟಿದೆ. ಇತ್ತೀಚೆಗೆ ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾದ ಒರಾಕ್ಜೈ ಜಿಲ್ಲೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಸೇರಿದಂತೆ 11 ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದರು. (ಏಜೆನ್ಸೀಸ್)