ಬಿಹಾರದ ಮತದಾರರ ಪಟ್ಟಿಯಲ್ಲಿ ಪಾಕಿಸ್ತಾನಿ ಮಹಿಳೆಯ ಹೆಸರು: 1956ರಲ್ಲೇ ಆಗಮನ! Pak woman

Pak woman
Published on

Pak woman : ಬಿಹಾರದ ಮತದಾರರ ಪಟ್ಟಿಯಲ್ಲಿ 1956 ರಲ್ಲಿ ಭಾರತಕ್ಕೆ ಬಂದು ನೆಲೆಸಿದ ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಹೆಸರಿರುವುದು ಬಹಿರಂಗವಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ಆಯೋಗ ನಡೆಸಿದ ವಿಶೇಷ ತೀವ್ರ ಪರಿಷ್ಕರಣೆ (SIR)ಯಲ್ಲಿ ಮಹಿಳೆಯ ವೋಟರ್​ ಐಡಿಯನ್ನು ವೆರಿಫೈ ಮಾಡಲಾಗಿತ್ತು. ಈ ಪ್ರಕರಣ ಗೃಹ ಸಚಿವಾಲಯದ ಗಮನಕ್ಕೆ ಬಂದಿದ್ದು, ಆ ಮಹಿಳೆಯನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ವೀಸಾ ಅವಧಿ ಮುಗಿದ ನಂತರವೂ ದೇಶದಲ್ಲಿ ಉಳಿದುಕೊಂಡಿರುವ ವಿದೇಶಿ ಪ್ರಜೆಗಳ ಕುರಿತು ಗೃಹ ಸಚಿವಾಲಯ ನಡೆಸಿದ ತನಿಖೆಯ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಇಮ್ರಾನಾ ಖಾನಂ ಎಂಬ ಮಹಿಳೆ ಭಾಗಲ್ಪುರದಲ್ಲಿ ನೆಲೆಸಿದ್ದಾರೆ.

ಅಂದಹಾಗೆ, ಪಾಕ್​ ಮೂಲದ ಇಮ್ರಾನಾ ಖಾನಂ ಸದ್ಯ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಅವರಿಗೆ ವಯಸ್ಸಾಗಿದ್ದು, ಅಸ್ವಸ್ಥಗೊಂಡಿದ್ದಾರೆ. ಇಲಾಖೆಯ ಆದೇಶದಂತೆ, ನಾನು ಫಾರ್ಮ್ ಅನ್ನು ಭರ್ತಿ ಮಾಡಿ ಅವರ ಹೆಸರನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇನೆ. ಅವರ ಪಾಸ್‌ಪೋರ್ಟ್ 1956 ರಲ್ಲೇ ರದ್ದಾಗಿದ್ದು, ಅವರಿಗೆ ವೀಸಾ 1958 ರಲ್ಲಿ ಸಿಕ್ಕಿತು. ಅವರು ಪಾಕಿಸ್ತಾನದವರು. ತನಿಖೆಯ ಮುಂದಿನ ಹಂತವನ್ನು ಇಲಾಖೆ ನಡೆಸಲಿದೆ ಎಂದು ಬೂತ್ ಮಟ್ಟದ ಅಧಿಕಾರಿ ಫರ್ಜಾನಾ ಖಾನಮ್ ಹೇಳಿದ್ದಾರೆ ಎಂದು ಎಎನ್​ಐ ಸುದ್ದಿ ಮಾಡಿದೆ.

ಅಂದಹಾಗೆ, ಭಾರತೀಯ ಚುನಾವಣಾ ಆಯೋಗ ಬಿಹಾರದಲ್ಲಿ SIR ಪ್ರಕ್ರಿಯೆ ನಡೆಸಿದೆ. ಈ ಪ್ರಕ್ರಿಯೆ ಬಳಿಕ ಅನೇಕ ಹೆಸರುಗಳನ್ನು ತೆಗೆದು ಹಾಕಲಾಗಿದ್ದು, 65 ಲಕ್ಷ ಮತದಾರರ ನವೀಕರಿಸಿದ ಪಟ್ಟಿಯನ್ನು ಆಯೋಗ ಬಿಡುಗಡೆ ಮಾಡಿದೆ. ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ಆದೇಶದ ನಂತರ ಈ ಪಟ್ಟಿಯನ್ನು ಪ್ರಕಟಿಸಲಾಯಿತು. ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ಈ ಪಟ್ಟಿಯನ್ನು ನೋಡಬಹುದಾಗಿದೆ.

ಮತದಾರರು ಈಗ ಬಿಹಾರದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ ಹೊಸ ಲಿಂಕ್ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಬಹುದು. ಇದರ ನಡುವೆ ಸಾವು, ವಲಸೆ ಅಥವಾ ನಕಲಿ ನೋಂದಣಿಯಂತಹ ಕಾರಣಗಳನ್ನು ನಿರ್ದಿಷ್ಟಪಡಿಸಿ ತೆಗೆದುಹಾಕಲಾದ ಹೆಸರುಗಳ ಜಿಲ್ಲಾವಾರು ಪಟ್ಟಿಗಳನ್ನು ಪ್ರಕಟಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಜಿಲ್ಲಾ ಕಚೇರಿಗಳಲ್ಲಿ ಈ ಪಟ್ಟಿಗಳನ್ನು ಪ್ರದರ್ಶಿಸಲು ಮತ್ತು ವ್ಯಾಪಕ ಪ್ರಸಾರಕ್ಕಾಗಿ ಸಾಮಾಜಿಕ ಜಾಲತಾಣವನ್ನು ಬಳಸಲು ಚುನಾವಣಾ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಬೂತ್ ಮಟ್ಟದ ಕಚೇರಿಗಳು ಮತ್ತು ಪಂಚಾಯತ್ ಕಚೇರಿಗಳು ಈ ಪಟ್ಟಿಗಳನ್ನು ಪ್ರಚಾರ ಮಾಡುವ ಕಾರ್ಯವನ್ನು ಆರಂಭಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net