ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಡಿ; ಪ್ರಧಾನಿ ಮತ್ತು ಯುಪಿ ಸಿಎಂಗೆ ಸೀಮಾ ಹೈದರ್ ಮನವಿ

Untitled design - 2023-07-21T171330.668
Published on

ಉತ್ತರಪ್ರದೇಶ: ಪಬ್​​ಜಿ ಆನ್​​ಲೈನ್​ ಗೇಮ್​ ಮೂಲಕ ಹುಟ್ಟಿಕೊಂಡ ಪ್ರೀತಿಯನ್ನು ಅರಸಿ, ಪಾಕಿಸ್ತಾನದಿಂದ ಭಾರತಕ್ಕೆ ಬಂದ ಮಹಿಳೆ ಸೀಮಾ ಹೈದರ್​, ಇದೀಗ ಸಾಕಷ್ಟು ವಿರೋಧಗಳ ಮಧ್ಯೆ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ತಮ್ಮದೊಂದು ಮನವಿಯನ್ನು ಮುಂದಿಟ್ಟಿದ್ದಾರೆ.

ಮಹಿಳೆ ಉತ್ತರಪ್ರದೇಶದ ಸಚಿನ್​ ಎಂಬ ಯುವಕನ ಮೇಲಿನ ಪ್ರೀತಿಗಾಗಿ ಪಾಕಿಸ್ತಾನದಿಂದ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ನುಸುಳಿ ಬಂದರು. ತದನಂತರ ಸೀಮಾ ಹೈದರ್​ ಮೇಲೆ ಸಾಕಷ್ಟು ಅನುಮಾನಗಳು ಕೇಳಿಬಂದಿದ್ದು, ಆಕೆ ಪಾಕಿಸ್ತಾನದ ಸ್ಪೈ ಎಂದು ಶಂಕಿಸಲಾಗಿತ್ತು. ಆದ್ರೆ, ಇದಕ್ಕೆ ಉತ್ತರಿಸಿರುವ ಮಹಿಳೆ, ನಾನು ಯಾವ ಗೂಢಚಾರಿಣಿಯಲ್ಲ ಎಂದು ಹೇಳಿದರು.

ಶೀಘ್ರದಲ್ಲೇ ಸತ್ಯ ಹೊರಬರಲಿದೆ ಎಂದು ಒತ್ತಿ ಹೇಳಿದ ಸೀಮಾ ಹೈದರ್​, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತನ್ನನ್ನು ಭಾರತದಿಂದ ವಾಪಸ್ ಪಾಕಿಸ್ತಾನಕ್ಕೆ ಕಳುಹಿಸದಂತೆ ಮನವಿ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net