

ಲಾಹೋರ್: ಪಾಕಿಸ್ತಾನ ಉನ್ನತ ಶಿಕ್ಷಣ ಆಯೋಗ(HEC) ಬುಧವಾರ ಶಿಕ್ಷಣ ಸಂಸ್ಥೆಗಳಲ್ಲಿ ಆಚರಣೆಯನ್ನು ನಿಷೇಧಿಸಿ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದಿದೆ.
ಸಾಮಾಜಿಕ ಸಾಂಸ್ಕೃತಿಕ ಮೌಲ್ಯಗಳನ್ನು ಅನುಸರಿಸಲು ವಿದ್ಯಾರ್ಥಿಗಳು ಈ ಉತ್ಸವ ಆಚರಣೆಯನ್ನು ನಿಷೇಧಿಸಲಾಗಿದೆ ಎಂದು ಆಯೋಗವು ಬುಧವಾರ ಹೊರಡಿಸಿದ್ದ ನೋಟಿಸ್‌ನಲ್ಲಿ ತಿಳಿಸಿತ್ತು.
ಇನ್ನು ಈ ಕುರಿತು ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ಕೊಟ್ಟಿರುವ ಉನ್ನತ ಶಿಕ್ಷಣ ಆಯೋಗವು ಎಲ್ಲಾ ಧರ್ಮ ಹಾಗೂ ನಂಬಿಕೆಗಳನ್ನು ಒಳಗೊಂಡ ಹಬ್ಬಗಳ ಆಚರಣಯ ಮೌಲ್ಯವನ್ನು ನಾವು ಹೆಚ್ಚು ಗೌರವಿಸುತ್ತೇವೆ. ಈ ನಿಟ್ಟಿನಲ್ಲಿ ಯಾರನ್ನು ನೋಯಿಸುವ ಉದ್ಧೇಶವನ್ನು ಹೊಂದಿರಲಿಲ್ಲ ಎಂದು ಉನ್ನತ ಶಿಕ್ಷಣ ಆಯೋಗ ಸ್ಪಷ್ಟನೆ ನೀಡಿದೆ.
HEC ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಗಿದೆ ಎಂಬ ಸಂದೇಶದ ಪತ್ರ ವೈರಲ್ ಆಗಿದೆ. ಆದರೆ, ಈ ಮೂಲಕ ಶಿಕ್ಷಣ ಸಂಸ್ಥೆಗಳಿಗೆ ತಿಳಿಸುವುದೇನೆಂದರೆ ಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನಾ ಗುಣಮಟ್ಟ ಮತ್ತು ರಾಷ್ಟ್ರದ ಸಿದ್ಧಾಂತದ ಪ್ರಕಾರ ರಚನಾತ್ಮಕವಾಗಿ ಯುವಕರನ್ನು ಹೆಚ್ಚು ಬಳಸಿಕೊಳ್ಳಬೇಕು ಎಂದು ತನ್ನ ಹೊಸ ಪ್ರಕಟಣೆಯಲ್ಲಿ ತಿಳಿಸಿದೆ.