ಪತ್ನಿಗೆ ಡ್ರಗ್ಸ್​ ನೀಡಿ ಪರಪುರುಷರ ಜತೆ ಕಳುಹಿಸುತ್ತಿದ್ದ ಪತಿ ಅರೆಸ್ಟ್​

Police
Published on

ಫ್ರಾನ್ಸ್​: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಗೆ ಪ್ರತಿನಿತ್ಯ ನಿತ್ಯ ಡ್ರಗ್ಸ್​ ನೀಡಿ ಬಳಿಕ ಆಕೆಯನ್ನು ಪರಪುರುಷರ ಬಳಿ ಕಳುಹಿಸುತ್ತಿದ್ದ ಘಟನೆ ಫ್ರಾನ್ಸ್​ನಲ್ಲಿ ನಡೆದಿದೆ.

ಕಳೆದ 10 ವರ್ಷಗಳಿಂದ ಮಹಿಳೆ ಮೇಲೆ 92 ಬಾರಿ ಅತ್ಯಾಚಾರ ಎಸಗಲಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ 26-73 ವಯೋಮಾನದ 51 ಮಂದಿಯನ್ನು ಬಂಧಿಸಿದ್ದು, 41 ಜನರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ಧಾರೆ.

anti-anxiety ಡ್ರಗ್​ ಬೆರಸುತ್ತಿದ್ದ

ಮಹಿಳೆಯ ಪತಿ ಡೊಮಿನಿಕ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆಕೆ ಸೇವಿಸುವ ಆಹಾರದಲ್ಲಿ ಆ್ಯಂಟಿ-ಆಂಗ್ಸೈಟಿ ಡ್ರಗ್ ಲೊರಾಜೆಪಮ್ ಬೆರಸುತ್ತಿದ್ದ. ಬಳಿಕ ಪರಪುರುಷರನ್ನು ತಮ್ಮ ಮನೆಗೆ ಕರೆಸಿಕೊಳ್ಳುತ್ತಿದ್ದ. ಬಳಿಕ ಆರೋಪಿಯೂ ಕೃತ್ಯವನ್ನು ಸೆರೆಹಿಡಿದು ABUSES ಎಂಬ ಫೈಲ್​ನಲ್ಲಿ ಸ್ಟೋರ್​ ಮಾಡುತ್ತಿದ್ದ. ಘಟನೆಯೂ 2011-2020ರ ಅವಧಿಯಲ್ಲಿ ನಡೆದಿದೆ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

VR

ಆರೋಪಿ ಡೊಮಿನಿಕ್ ಮೊದಲಿಗೆ ವೆಬ್​ಸೈಟ್​ ಒಂದರಲ್ಲಿ ಡ್ರಗ್ಸ್​ ಸೇವಿಸಿದವರ ಜೊತೆಗೆ ಅಸಹಜ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆಗಿನ ಚರ್ಚೆಯಲ್ಲಿ ಭಾಗಿಯಾಗಿದ್ದ. ಇದಾದ ಬಳಿಕ ಆರೋಪಿಯೂ ಇದರಿಂದ ಉತ್ತೇಜನಗೊಂಡು ತನ್ನ ಹೆಂಡತಿಯ ಮೇಲೆ ಡ್ರಗ್ಸ್​ ಪ್ರಯೋಗಿಸಿ ಆಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ.

ಆರೋಪಿಯ ಪತ್ನಿಯೂ ರೂಮಿನಲ್ಲಿ ಕ್ಯಾಮರಾ ಇರುವುದನ್ನು ತೆರೆದು ಗಮನಿಸಿದಾಗ ಕೃತ್ಯ ಬಳಕಿಗೆ ಬಂದಿದೆ. ಈ ಬಗ್ಗೆ ತನ್ನ ಪತ್ನಿ ಆತನನ್ನು ವಿಚಾರಿಸಿದ್ದು, ತಪ್ಪೊಪ್ಪಿಕೊಂಡಿದ್ಧಾನೆ. ಸಂತ್ರಸ್ತ ಮಹಿಳೆಯೂ ತನ್ನ ಪತಿ ಹಾಗೂ ಅತ್ಯಾಚಾರ ಎಸಗಿದ 92 ಪುರುಷರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ಧಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net