

ಲಾಹೋರ್: ಆರ್ಥಿಕ ಸಂಕಷ್ಟದಿಂದಾಗಿ ವಿಶ್ವದ ಮುಂದೆ ಬೆತ್ತಲಾಗಿರುವ ಪಾಕಿಸ್ತಾನ ಸದಾ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಲ್ಲಿರುತ್ತದೆ. ಪಾಕಿಸ್ತಾನದಲ್ಲಿರುವ ಹಾಲಿ ಹಾಗೂ ಮಾಜಿ ಸಚಿವರು ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಿ ತೀವ್ರ ಟೀಕೆಗೆ ಗುರಿಯಾಗುತ್ತಾರೆ. ಅದೇ ರೀತಿ ಈಗ ಮಾಜಿ ಪ್ರಧಾನಿ ನವಾಜ್ ಷರೀಫ್ ನೀಡಿರುವ ಹೇಳಿಕೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ಪಾಕ್ನ ನರಿಬುದ್ಧಿ ವಿಶ್ವದ ಮುಂದೆ ಮತ್ತೊಮ್ಮೆ ಬಯಲಾಗಿದೆ.
1999ರಲ್ಲಿ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪಾಕ್ನ ಅಂದಿನ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಇಸ್ಲಾಮಾಬಾದ್ನಲ್ಲಿ ಸಹಿ ಮಾಡಲಾಗಿದ್ದ ಒಪ್ಪಂದವನ್ನು ಉಲ್ಲಂಘಿಸಿದ್ದಾಗಿ ತಿಳಿಸಿದ್ದಾರೆ. ಈ ವಿಚಾರ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಕುರಿತು ಮಾತನಾಡಿರುವ ಪರ್ವೇಜ್, ಮೇ 28, 1998ರಂದು ಪಾಕಿಸ್ತಾನವು ಭಾರತದ ವಿರುದ್ಧ ಐದು ಪರಮಾಣುಗಳ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ವಾಜಪೇಯಿ ಅವರು ಫೆಬ್ರವರಿ 21, 1999ರಂದು ಪಾಕಿಸ್ತಾನಕ್ಕೆ ಬಂದು ನಮ್ಮ ಜೊತೆ ಲಾಹೋರ್ ಒಪ್ಪಂದವನ್ನು ಮಾಡಿಕೊಂಡರು. ಈ ಒಪ್ಪಂದವು ಉಭಯ ದೇಶಗಳ ನಡುವಿನ ಶಾಂತಿ ಮತ್ತು ಸ್ಥಿರತೆಯ ದೃಷ್ಟಿಕೋನದ ಬಗ್ಗೆ ಮಾತನಾಡುವ ಪ್ರಗತಿಯ ಸಂಕೇತವಾಗಿತ್ತು. ಇದಾದ ಕೆಲ ತಿಂಗಳ ಬಳಿಕ ಅಂದು ನಮ್ಮ ಜನರಲ್ ಆಗಿದ್ದ ಪರ್ವೇಜ್ ಮುಷರಫ್ ಮಾಡಿದ ಒಂದು ಎಡವಟ್ಟಿನಿಂದ ಎರಡು ದೇಶಗಳ ನಡುವೆ ಕಾರ್ಗಿಲ್ ಯುದ್ಧವಾಯಿತು. ಈ ಮೂಲಕ ನಾವು ಭಾರತದೊಂದಿಗೆ ಮಾಡಿಕೊಂಡಿದ್ದ ಶಾಂತಿ ಒಪ್ಪಂದ ಉಲ್ಲಂಘನೆಯಾಯಿತು ಎಂದು ಹೇಳಿದ್ದಾರೆ.
ಅಂದು ಪರಮಾಣು ಪರೀಕ್ಷಿಸದಂತೆ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ 5 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು. ಆದರೆ, ನಾನು ಅದನ್ನು ತಿರಸ್ಕರಿಸಿ ಪರಮಾಣು ಪರೀಕ್ಷೆ ನಡೆಸುವಂತೆ ಸೂಚಿಸಿದೆ. ಒಂದು ವೇಳೆ ಇಮ್ರಾನ್ ಖಾನ್ ಆ ಜಾಗದಲ್ಲಿ ಇದ್ದಿದ್ದರೆ ಅಮೆರಿಕದವರ ಪ್ರಸ್ತಾಪವನ್ನು ಒಪ್ಪಿಕೊಂಡು ನಮ್ಮನ್ನು ತಲೆತಗಿಸುವಂತೆ ಮಾಡಿರುತ್ತಿದ್ದರು ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.