

ಕರೊನಾ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಜನರಿಗೆ ಅಗತ್ಯ ದಿನಸಿ ವಸ್ತುಗಳನ್ನು ನೀಡಲಾಗುತ್ತಿದೆ. ಆದರೆ ಅಲ್ಪಸಂಖ್ಯಾತರಾಗಿರುವ ಹಿಂದೂ ಮತ್ತು ಕ್ರೖೆಸ್ತ ಧರ್ವಿುಯರಿಗೆ ಅದನ್ನು ನೀಡಲಾಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
ಲಿಯಾರಿ, ಸಿಂಧ್, ಸಚಲ್ ಘೊತ್ ಸೇರಿ ಕರಾಚಿಯ ಅನೇಕ ಸ್ಥಳಗಳಲ್ಲಿ ಹಿಂದೂಗಳು ವಾಸವಿದ್ದಾರೆ. ದೇಶದ ಶೇ.4 ಜನಸಂಖ್ಯೆಯನ್ನು ಹೊಂದಿರುವ ಹಿಂದೂಗಳಿಗೆ ಮೊದಲಿನಿಂದಲೂ ಕನಿಷ್ಠ ಮಾನವೀಯ ಹಕ್ಕುಗಳನ್ನು ಸಹ ನೀಡಲಾಗುತ್ತಿಲ್ಲ. ಇದೀಗ ಕರೊನಾ ವಿಚಾರದಲ್ಲಿಯೂ ಅದು ಮುಂದುವರಿದಿದೆ.
ಕೆಲ ಪ್ರದೇಶಗಳಲ್ಲಿ ಆಹಾರ ಸಾಮಗ್ರಿಗಳ ಹಂಚಿಕೆ ನಡೆಯುತ್ತಿದ್ದು ಅಲ್ಲಿ ಹಿಂದೂಗಳು ಹೋದರೆ, ಇದು ಕೇವಲ ಮುಸ್ಲಿಂರಿಗೆ ಸೇರಬೇಕಾದದ್ದು ಎಂದು ಹೇಳಿ ಕಳುಹಿಸಲಾಗುತ್ತಿದೆ ಎಂದು ಅಲ್ಲಿನ ಹಿಂದುಗಳು ಅಳಲು ತೋಡಿಕೊಂಡಿದ್ದಾರೆ.