

ವಿಡಿಯೋ ಕಾಲ್ನಲ್ಲಿ ಪಾಕಿಸ್ತಾನದ ಓರ್ವ ಪತ್ರಕರ್ತ ಮತ್ತು ತಾಲಿಬಾನ್ ವಕ್ತಾರನ ನಡುವೆ ನಡೆದ ಫ್ಲೈಯಿಂಗ್ ಕಿಸ್ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ಸಹ ವ್ಯಕ್ತವಾಗಿವೆ.
ಇತ್ತೀಚೆಗೆ ಪಾಕ್ ಪತ್ರಕರ್ತ ಜಮೀಲ್ ಫಾರೂಕಿ, ತಾಲಿಬಾನ್ ವಕ್ತಾರ ಸುಹೈಲ್ ಸಹೀನ್ ಜತೆ ವಿಡಿಯೋ ಕಾಲ್ನಲ್ಲಿ ಮಾತನಾಡಿರುವ ದೃಶ್ಯವನ್ನು ಹಂಚಿಕೊಂಡಿದ್ದರು.
ಈ ವಿಡಿಯೋದಲ್ಲಿ ಪತ್ರಕರ್ತ ಜಮೀಲ್ ಹಾಗೂ ತಾಲಿಬಾನ್ ವಕ್ತಾರ ಸುಹೈಲ್ ಇಬ್ಬರೂ ಫ್ಲೈಯಿಂಗ್ ಕಿಸ್ ಮಾಡಿದ್ದರು. ಮೊದಲು ಮಾತನಾಡಿದ ಪತ್ರಕರ್ತ ಫಾರೂಕಿ, 'ಸಹೀನ್ ಭಾಯ್, ಬಹುತ್ ಬಹುತ್ ಶುಕುರಿಯ' ಎಂದು ಹೇಳಿದ್ದಾರೆ.
ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿಯಲ್ಲಿ ಕಾಲೆಳೆದಿದ್ದಾರೆ. ಕೆಲವರಂತು ಇದು 'ಬ್ರೊಮ್ಯಾನ್ಸ್' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.